alex Certify ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ

ಆಹಾರ ವಿಜ್ಞಾನದಲ್ಲಿ ಪ್ರಯೋಗಗಳು ಮನುಕುಲ ಇರುವವರೆಗೂ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಡುಗೆ ಮಾಡುವ ಖಾದ್ಯಗಳೆಲ್ಲಾ ಸಾಕಷ್ಟು ಪ್ರಯೋಗಗಳ ಬಳಿಕವಷ್ಟೇ ಮುಖ್ಯವಾಹಿನಿಗೆ ಬಂದ ರೆಸಿಪಿಗಳಾಗಿವೆ.

ಆಹಾರ ಸಂಶೋಧಕಿ ಹಾಗೂ ಬ್ಲಾಗರ್‌ ಶ್ವೇತಾ ಶಿವಕುಮಾರ್‌ ತಂದಿರುವ ಈ ಹೊಸ ಕಾನ್ಸೆಪ್ಟ್‌ನಲ್ಲಿ ದಕ್ಷಿಣದ ಜನಪ್ರಿಯ ತಿಂಡಿಗಳಾದ ಇಡ್ಲಿ ಮತ್ತು ದೋಸೆಗಳಿಗೆ ಹೊಸ ಟ್ವಿಸ್ಟ್ ನೀಡಲಾಗಿದೆ.

ಅಕ್ಕಿ ಮತ್ತು ಉದ್ದಿನ ಬೇಳೆಯೊಂದಿಗೆ ಮಾಡುವ ಇಡ್ಲಿಗೂ, ಸ್ವಲ್ಪ ಬೇಯಿಸಿದ ಅಕ್ಕಿ ಮತ್ತು ಉದ್ದಿನ ಬೇಳೆಯಲ್ಲಿ ಮಾಡಿದ ಇಡ್ಲಿಗೂ ಇರುವ ವ್ಯತ್ಯಾಸವನ್ನು ಶ್ವೇತಾ ಸ್ಪಷ್ಟವಾದ ಚಿತ್ರಗಳ ಮೂಲಕ ತೋರಿದ್ದಾರೆ. ನೀರಿನ ಅಳತೆ ಹಾಗೂ ಹುಳಿ ಬರಲು ಹಿಟ್ಟನ್ನು ಇಟ್ಟ ಸಮಯಗಳನ್ನು ಸಮನಾಗಿ ತೆಗೆದುಕೊಂಡ ಶ್ವೇತಾ, ಅಕ್ಕಿ ಬೆಂದಾಗ ಅದರಲ್ಲಿನ ಪಿಷ್ಠದ ಅಂಶದಿಂದಾಗಿ ಇಡ್ಲಿ ಹಿಟ್ಟು ಹೇಗೆ ಗಟ್ಟಿಯಾಗುತ್ತದೆ ಎಂದು ವಿವರಿಸಿದ್ದಾರೆ.

ಅರೆಬೆಂದ ಅಕ್ಕಿಯ ಹಿಟ್ಟಿನಲ್ಲಿ, ಲ್ಯಾಕ್ಟೋಬಾಸಿಲ್ಲಸ್ ಬ್ಯಾಕ್ಟೀರಿಯಾ ಇದ್ದ ಕಾರಣ ಅವುಗಳು ಅಕ್ಕಿಯಲ್ಲಿದ್ದ ಪಿಷ್ಠದಂಶದ ಮೇಲೆ ಎರಗುವ ಕಾರಣ, ಈ ಹಿಟ್ಟು ಬೇಗ ಹುಳಿ ಬರಲು ಆರಂಭಿಸುತ್ತದೆ. ಹಸಿ ಅಕ್ಕಿಯ ಹಿಟ್ಟು ತಡವಾಗಿ ಹುಳಿ ಬಂದರೂ ಚೆನ್ನಾಗಿ ಹುಳಿ ಬಂದಿರುತ್ತದೆ.

ಹಸಿ ಅಕ್ಕಿಯಿಂದ ಮಾಡಿದ ಇಡ್ಲಿ ಸ್ವಲ್ಪ ಗಟ್ಟಿಯಾಗಿದ್ದು, ಇದೇ ಅಕ್ಕಿಯಿಂದ ಮಾಡಿದ ದೋಸೆ ಉತ್ತಮವಾದದ್ದೆಂದು ಶ್ವೇತಾರ ಪ್ರಯೋಗದಲ್ಲಿ ಕಂಡುಬಂದಿದೆ. ಹಸಿ ಅಕ್ಕಿಯ ಸಂಪಣ ತವಾಕ್ಕೆ ಚೆನ್ನಾಗಿ ಅಂಟುವ ಕಾರಣ ದೋಸೆ ಚೆನ್ನಾಗಿ ಬೆಂದು ಕಂದುಬಣ್ಣಕ್ಕೆ ಬರುವುದರಿಂದ ಇನ್ನಷ್ಟು ರುಚಿಕರವಾಗಿರುತ್ತದೆ ಎಂದು ಶ್ವೇತಾ ವಿವರಿಸಿದ್ದಾರೆ.

https://twitter.com/Upgrade_My_Food/status/1469328739100246021?ref_src=twsrc%5Etfw%7Ctwcamp%5Etweetembed%7Ctwterm%5E1469328739100246021%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328743357366272?ref_src=twsrc%5Etfw%7Ctwcamp%5Etweetembed%7Ctwterm%5E1469328748499677192%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328743357366272?ref_src=twsrc%5Etfw%7Ctwcamp%5Etweetembed%7Ctwterm%5E1469328748499677192%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328753054687241?ref_src=twsrc%5Etfw%7Ctwcamp%5Etweetembed%7Ctwterm%5E1469328757488029699%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328757488029699?ref_src=twsrc%5Etfw%7Ctwcamp%5Etweetembed%7Ctwterm%5E1469328761904640002%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328766736515078?ref_src=twsrc%5Etfw%7Ctwcamp%5Etweetembed%7Ctwterm%5E1469328771606003723%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328766736515078?ref_src=twsrc%5Etfw%7Ctwcamp%5Etweetembed%7Ctwterm%5E1469328771606003723%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328771606003723?ref_src=twsrc%5Etfw%7Ctwcamp%5Etweetembed%7Ctwterm%5E1469328773938126855%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328775473213450?ref_src=twsrc%5Etfw%7Ctwcamp%5Etweetembed%7Ctwterm%5E1469328779281588238%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

https://twitter.com/Upgrade_My_Food/status/1469328783744376838?ref_src=twsrc%5Etfw%7Ctwcamp%5Etweetembed%7Ctwterm%5E1469328787947065344%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-food-experiment-compares-idli-dosas-made-of-parboiled-and-raw-rice-batter-4544726.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...