ಮತ್ತೊಂದು ಹೊಸ ವರ್ಷ ಬರುತ್ತಿದ್ದಂತೆಯೇ ಮತ್ತದೇ ಹಳೆಯ ಸಂಕಲ್ಪಗಳನ್ನು ಹೊಸದಾಗಿ ಮಾಡಲು ಜನರು ಸಜ್ಜಾಗುತ್ತಿರುವ ನಡುವೆ 77-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕ್ಯಾನ್ಸರ್ನ 4ನೇ ಹಂತದಿಂದ ಬಳಲುತ್ತಿದ್ದರೂ ಸಹ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಐಸ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋವೊಂದರ ಮೂಲಕ ವೈರಲ್ ಆಗಿದ್ದಾರೆ.
ಟ್ರೇನರ್ ಒಬ್ಬರೊಂದಿಗೆ ಭಾರೀ ಉತ್ಸಾಹದಿಂದ ಈ ಹಿರಿಯ ಜೀವ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಓನ್ ಟ್ರೇಲ್ ಎಂಬ ಕಂಪನಿಯಲ್ಲಿ ಸಿಇಓ ಆಗಿರುವ ಇವರ ಮಗಳು ರೆಬೆಕಾ ಬಾಷಿಯನ್ ತಮ್ಮ ತಂದೆಯ ಈ ನವೋಲ್ಲಾಸದ ಕ್ಷಣಗಳ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರೊಸ್ಟ್ರೇಟ್ ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ತಂದೆ, ಎಲ್ಲಾ ಅಡಚಣೆಗಳನ್ನು ಮೀರಿ ನಿಂತು ಕೆಲವೇ ವರ್ಷಗಳ ಹಿಂದೆ ಸ್ಕೇಟಿಂಗ್ ಕಲಿತ ವಿಷಯವನ್ನು ಸಂತಸದಿಂದ ಹಂಚಿಕೊಂಡಿದ್ದಾರೆ.
“ಏನಾದರೂ ಹೊಸದೊಂದನ್ನು ಆರಂಭಿಸಲು ಬಹಳ ವಯಸ್ಸಾಯಿತು ಎಂದುಕೊಳ್ಳುವ ಮಂದಿಗೆ…..,” ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ರೆಬೆಕಾ.
https://youtu.be/EFigFI0ajA0