ಮೈಸೂರು: ತಿಳಿಯದೇ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ ಎರಡು ವರ್ಷದ ಮಗು ಸಾವು ಕಂಡ ಘಟನೆ ಮೈಸೂರಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ರಾಮು ಮತ್ತು ಜಯಲಕ್ಷ್ಮಿ ದಂಪತಿಯ ಎರಡು ವರ್ಷದ ಪುತ್ರಿ ಆದ್ಯಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಸ್ನಾನ ಮಾಡಿಸುವಾಗ ತಣ್ಣೀರು ನೀರು ತರಲು ತಾಯಿಯ ಹೋಗಿದ್ದು, ಈ ವೇಳೆ ಬಿಸಿ ನೀರು ಸುಡುತ್ತದೆ ಎನ್ನುವುದನ್ನು ತಿಳಿಯದ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಆದ್ಯಾಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದೆ.