ತಾಂಜೇನಿಯಾ ಮೂಲದ ಸೋದರ-ಸೋದರಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಇದೀಗ ಕಿಲಿ ಪಾಲ್ ಅವರು ಅರ್ಜಿತ್ ಸಿಂಗ್ ಅವರ ಜನಪ್ರಿಯ ಹಾಡು ಖೈರಿಯಾತ್‌ಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಕಿಲಿ ಅವರು 2019 ರ ಚಲನಚಿತ್ರ ಚಿಚೋರ್‌ನ ಭಾವಪೂರ್ಣ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಾಡಿಗೆ ಕಿಲಿ ಪಾಲ್ ಬಹಳ ಚೆನ್ನಾಗಿ ಲಿಪ್ ಸಿಂಕ್ ಮಾಡಿದ್ದಾರೆ.
ರ‍್ಯಾಪರ್ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ, ಈ ಕ್ಲಿಪ್ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಕಿಲಿಯ ಅಭಿನಯವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ಪ್ರೀತಿ ಹಾಗೂ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.
ಕಿಲಿ ಪಾಲ್ ಬಹಳ ಪ್ರತಿಭಾವಂತರಾಗಿದ್ದು, ಇವರ ವಿಡಿಯೋಗಳನ್ನು ನೋಡಲು ಯಾವಾಗಲೂ ಇಷ್ಟಪಡುವುದಾಗಿ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=vi1FLLE4cEc