ದೇಶದಲ್ಲಿ ಕೊರೊನಾ ಅಪಾಯ ಕಡಿಮೆಯಾಗಿದೆ. ಆದರೆ ಕೊರೊನಾ ಸೋಂಕು ಸಂಪೂರ್ಣ ದೇಶ ಬಿಟ್ಟು ಹೋಗಿಲ್ಲ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಒಮಿಕ್ರಾನ್ ಎಲ್ಲರ ಆತಂಕ ಹೆಚ್ಚಿಸಿದೆ.
ಜನವರಿಯಲ್ಲಿ ಕೊರೊನಾ ಮತ್ತಷ್ಟು ಹೆಚ್ಚಾಗಲಿದೆ ಎಂಬ ಭಯವಿದೆ. ಈ ಮಧ್ಯೆ ಬಾಲಿವುಡ್ ನಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಅಮೃತಾ ಅರೋರಾಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಸೂಪರ್ ಸ್ಪ್ರೆಡರ್ ಆಗಿರುವ ಸಾಧ್ಯತೆಯೂ ಇದೆ. ಕಳೆದ ಕೆಲವು ದಿನಗಳಲ್ಲಿ ಇಬ್ಬರು ನಟಿಯರು ಬಾಲಿವುಡ್‌ನ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು. ಬಿಎಂಸಿ ಈಗಾಗಲೇ ಎಚ್ಚೆತ್ತುಕೊಂಡಿದೆ. ಕರೀನಾ ಹಾಗೂ ಅಮೃತಾ ಸಂಪರ್ಕಕ್ಕೆ ಬಂದವರ ಪತ್ತೆ ಶುರು ಮಾಡಿದೆ. ಸಂಪರ್ಕಕ್ಕೆ ಬಂದವರಿಗೆ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡುವ ತಯಾರಿ ನಡೆಸಿದೆ. ಶೀಘ್ರದಲ್ಲಿಯೇ ಪರೀಕ್ಷೆ ನಡೆಸಿ, ವರದಿ ಪಡೆಯುವಂತೆ ಬಿಎಂಸಿ ಸೂಚನೆ ನೀಡಿದೆ. ಕರೀನಾ ಹಾಗೂ ಅಮೃತಾಗೆ ಕೊರೊನಾ ಕಾಣಿಸಿಕೊಳ್ತಿದ್ದಂತೆ ಅವರ ಸಂಪರ್ಕಕ್ಕೆ ಬಂದಿದ್ದ ಕಲಾವಿದರು ಎಚ್ಚರಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಸಂಪರ್ಕಕ್ಕೆ ಬಂದವರ ಹೆಸರು ಬಹಿರಂಗವಾಗಿಲ್ಲ.
ಕರೀನಾ ಕಪೂರ್ ಸದ್ಯವೇ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಖಾನ್ ಜೊತೆ ನಟಿಸಿರುವ ಈ ಚಿತ್ರ 2022ರಲ್ಲಿ ತೆರೆಗೆ ಬರಲಿದೆ.