ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿಯ ಖಾಸಗಿ ವಿಷಯಗಳನ್ನು ತಿಳಿಯಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಜೋಡಿ ಸಕ್ರಿಯವಾಗಿದೆ. ಸೆಲೆಬ್ರಿಟಿ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ, ಸುರಕ್ಷತೆ ಬಗ್ಗೆ ಬಹಳ ಜಾಗೃತರಾಗಿದ್ದಾರೆ.
ಅನುಷ್ಕಾ ಮತ್ತು ವಿರಾಟ್ ಅಂಗರಕ್ಷಕರನ್ನಿಟ್ಟುಕೊಂಡಿದ್ದಾರೆ. ಅವರ ಹೆಸರು ಪ್ರಕಾಶ್ ಸಿಂಗ್. ಅವರನ್ನು ಸೋನು ಎಂದೂ ಕರೆಯಲಾಗುತ್ತದೆ. ಸೋನು, ಅನುಷ್ಕಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಬಾಡಿಗಾರ್ಡ್ ಸೋನು ಬಗ್ಗೆ ಕುತೂಹಲಕಾರಿ ವಿಷ್ಯ ಹೊರ ಬಿದ್ದಿದೆ. ಡಿಎನ್ಎ ವರದಿ ಪ್ರಕಾರ, ಅನುಷ್ಕಾ ಶರ್ಮಾ ಸೋನುಗೆ ವರ್ಷಕ್ಕೆ 1.2 ಕೋಟಿ ರೂಪಾಯಿ ಅಂದರೆ ತಿಂಗಳಿಗೆ 10 ಲಕ್ಷ ರೂಪಾಯಿ ಸಂಭಾವನೆ ನೀಡುತ್ತಾರಂತೆ.
ಸೋನು, ಅನುಷ್ಕಾ ಶರ್ಮಾ ಬಾಡಿಗಾರ್ಡ್ ಆಗಿ ಅನೇಕ ವರ್ಷಗಳಿಂದ ಕೆಲಸ ಮಾಡ್ತಿದ್ದಾರೆ. ಅನುಷ್ಕಾ ಶರ್ಮಾ 2017 ರಲ್ಲಿ ವಿರಾಟ್ ಕೊಹ್ಲಿ ಮದುವೆಯಾದರು. ಆದರೆ ಅದಕ್ಕಿಂತ ಮೊದಲೇ ಸೋನು, ಅನುಷ್ಕಾ ಜೊತೆಗಿದ್ದಾರೆ. ವಿರುಷ್ಕ ಕುಟುಂಬದಲ್ಲಿ ಒಬ್ಬರಾಗಿರುವ ಸೋನು, ಅನುಷ್ಕ ಗರ್ಭಿಣಿಯಾಗಿದ್ದಾಗ ಅವರ ಆರೈಕೆ ಮಾಡಿದ್ದಾರೆ. ಸೋನು ಪಿಪಿಇ ಕಿಟ್ ಧರಿಸಿ, ಅನುಷ್ಕಾರನ್ನು ನೋಡಿಕೊಂಡಿದ್ದರಂತೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇಬ್ಬರೂ ಡಿಸೆಂಬರ್ 2017 ರಲ್ಲಿ ಇಟಲಿಯ ಟಸ್ಕನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರಿಗೂ ವಮಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಆದ್ರೆ ಈವರೆಗೂ ಮಗುವಿನ ಮುಖ ತೋರಿಸಿಲ್ಲ. ಮಗಳಿಗೆ ಈ ಬಗ್ಗೆ ತಿಳುವಳಿಕೆ ಬರುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಮುಖ ತೋರಿಸದಿರಲು ದಂಪತಿ ನಿರ್ಧರಿಸಿದ್ದಾರೆ.