ಟೀಂ ಇಂಡಿಯಾ ಡಿಸೆಂಬರ್ 26ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ, 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈಗಾಗಲೇ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಕೆಲವೇ ದಿನಗಳಲ್ಲಿ ಏಕದಿನ ಪಂದ್ಯಕ್ಕೆ ತಂಡ ಪ್ರಕಟವಾಗಲಿದೆ. ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಆಪ್ತ ಹಾಗೂ ಪಂದ್ಯ ವಿಜೇತ ಎಂದೇ ಹೆಸರು ಪಡೆದಿದ್ದ ಶಿಖರ್ ಧವನ್ ಮೇಲೆ ಎಲ್ಲರ ಕಣ್ಣಿದೆ.
ಶಿಖರ್ ಧವನ್ ಗೆ ಮೂರು ಫಾರ್ಮೆಟ್‌ಗಳಲ್ಲೂ ಆಡಲು ಅವಕಾಶ ಸಿಗ್ತಿಲ್ಲ. ಟೆಸ್ಟ್, ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಆಡಲು ಧವನ್ ಗೆ ಅವಕಾಶ ಸಿಗ್ತಿಲ್ಲ. ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಕಾರಣದಿಂದ ಧವನ್ ಗೆ ಟೆಸ್ಟ್ ಬಾಗಿಲು ಮುಚ್ಚಿದೆ.
35ರ ಹರೆಯದ ಶಿಖರ್ ಧವನ್, ಏಕದಿನ ಹಾಗೂ ಟಿ20 ತಂಡದಿಂದಲೂ ದೂರವಾಗಿದ್ದಾರೆ. ಟಿ20 ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಶಿಖರ್ ಧವನ್‌ಗೆ ಅವಕಾಶ ಸಿಗಲಿಲ್ಲ.
ಶಿಖರ್ ಧವನ್, 2021ರ ಜುಲೈನಲ್ಲಿ ಏಕದಿನ ಮತ್ತು ಟಿ-20ಪಂದ್ಯಗಳನ್ನು ಆಡಿದ್ದರು. ಧವನ್ 2018 ರಿಂದ ಟೆಸ್ಟ್ ಕ್ರಿಕೆಟ್ ಆಡಿಲ್ಲ. ರೋಹಿತ್ ಶರ್ಮಾ ಜೊತೆ ಒಪನರ್ ಆಗಿ ಬರ್ತಿದ್ದ ಧವನ್, ಅನೇಕ ಮ್ಯಾಚ್ ವಿನ್ನರ್ ಆಗಿದ್ದಾರೆ.