ಬೆಂಗಳೂರು: ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಂಎಲ್ ಸಿ.ಎಂ.ಇಬ್ರಾಹಿಂ, ಸಂವಿಧಾನದಲ್ಲಿಯೇ ಕಾನೂನು ಇರುವಾಗ ಇವರು ಪ್ರತ್ಯೇಕವಾಗಿ ಮಸೂದೆ ಮಂಡಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಮದುವೆ ಮೂಲಕ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂಬುದು ಸುಳ್ಳು. ಲವ್ ಇರುವುದರಿಂದಲೇ ಮದುವೆಯಾಗೋದು. ಯಾರಾದರೂ ಲವ್ ಇಲ್ಲ ಅಂದರೆ ಮದುವೆಯಾಗ್ತಾರಾ? ಇದರಲ್ಲಿ ಜಿಹಾದಿ ಏನ್ ಬಂತು? ಎಂದು ಕೇಳಿದ್ದಾರೆ.
ಒಂದೇ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು ದೃಢ, ಶಾಲೆ ಸೀಲ್ ಡೌನ್
ನಾನು , ಮದುವೆಯಾಗಿರೋದು ಲವ್ ನಿಂದಲೇ, ನೀವು ಆಗಿರೋದು ಲವ್ ನಿಂದಲೇ ಅಂದಮೇಲೆ ಮತಾಂತರ, ಜಿಹಾದಿ ಎಂಬುದು ಏಲ್ಲಿಂದ ಬಂತು? ಸಂವಿಧಾನದಲ್ಲಿಯೇ ಅವಕಾಶವಿರುವಾಗ ರಾಜ್ಯ ಸರ್ಕಾರ ಹೊಸದಾಗಿ ಕಾನೂನು ಜಾರಿ ಮಾಡಲು ಹೊರಟಿರುವುದಾದರೂ ಯಾಕೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.