ಖ್ಯಾತ ಉದ್ಯಮಿ ರತನ್ ಟಾಟಾ ಅವರ ಬೆಂಬಲದೊಂದಿಗೆ ಪ್ರಾರಂಭವಾದ ರೆಪೋಸ್ ಎನರ್ಜಿ ಈಗ ಮೊಬೈಲ್ ಪೆಟ್ರೋಲ್ ಪಂಪ್ ಅನ್ನು ಪ್ರಾರಂಭಿಸಿದೆ,
ಇದು ಕಾರ್ಪೊರೇಟ್ ಘಟಕಗಳು ಮತ್ತು ವ್ಯಕ್ತಿಗಳಿಗೆ ಮನೆ ಬಾಗಿಲಿಗೆ ಡೀಸೆಲ್ ವಿತರಣೆ ಮಾಡಲಿದೆ. ಕಂಪನಿಯು Repos 2.0 Beta ಮೊಬೈಲ್ ಪೆಟ್ರೋಲ್ ಪಂಪ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಮೊಬೈಲ್ ಪೆಟ್ರೋಲ್ ಪಂಪ್ 3,000 ಲೀಟರ್ಗಳಷ್ಟು ಸಾಮರ್ಥ್ಯ ಹೊಂದಿದೆ. ಗ್ರಾಹಕರಿಗೆ 100 ಲೀಟರ್ಗಳಷ್ಟು ಕಡಿಮೆ ಆರ್ಡರ್ಗಳನ್ನು ಪೂರೈಸಬಹುದು. ಬಳಕೆದಾರರು ತಮ್ಮ ಅಗತ್ಯ ಮೊತ್ತವನ್ನು Repos ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.
ರೆಪೋಸ್ ಎನರ್ಜಿಯ ಸಹ-ಸಂಸ್ಥಾಪಕ ಚೇತನ್ ವಾಲುಂಜ್, ನಮ್ಮ ಪ್ರಯಾಣದಲ್ಲಿ ಮುಂದಿನ ಹಂತದ ಬೆಳವಣಿಗೆಗೆ ನಾವು ಉತ್ಸುಕರಾಗಿದ್ದೇವೆ. ಮುಂಬರುವ ವರ್ಷಗಳಲ್ಲಿ ಇಂಧನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿದೆ. ಸಮರ್ಥ ವಿತರಣಾ ಸೇವೆಗಳೊಂದಿಗೆ ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಸ್ಥಾಪಿಸಲಾದ ರೆಪೋಸ್ ಎನರ್ಜಿ, ಆರ್ಥಿಕ ವರ್ಷ 21 ರಲ್ಲಿ 3,200 ಮೊಬೈಲ್ ಪೆಟ್ರೋಲ್ ಪಂಪ್ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು.
ಸಹ ಸಂಸ್ಥಾಪಕಿ ಅದಿತಿ ಭೋಸಲೆ ವಾಲುಂಜ್ ಅವರು, ನಮ್ಮಲ್ಲಿ 320 ವಾಹನಗಳ ಫ್ಲೀಟ್ ಇದೆ, ಅದರಲ್ಲಿ 100 ಕ್ಕೂ ಹೆಚ್ಚು ವಾಹನಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.