ಮಂಡ್ಯ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳಿಗೆ ಪ್ರೊಟೀನ್ ಗಾಗಿ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮೊಟ್ಟೆ ನೀಡುವುದರ ಬಗ್ಗೆ ತಜ್ಞರು ಸಹ ಸಲಹೆ ನೀಡಿದ್ದಾರೆ. ಮಕ್ಕಳಿಗೆ ಮೊಟ್ಟೆಯೊಂದಿಗೆ ಬಾಳೆಹಣ್ಣು ಕೂಡ ಕೊಡುತ್ತಿದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ನೀಡಲು ಪ್ರೋಟೀನ್ ಯುಕ್ತ ಪದಾರ್ಥ ಆಯ್ಕೆ ಮಾಡುತ್ತಿದ್ದೇವೆ. ತಜ್ಞರು ಒಪ್ಪಿದರೆ. ಮುಂದಿನ ದಿನಗಳಲ್ಲಿ ಪ್ರೊಟೀನ್ ಯುಕ್ತ ಆಹಾರ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದರಿಂದ ಪ್ರೊಟೀನ್ ಯುಕ್ತ ಆಹಾರ ನೀಡಲು ತಜ್ಞರು ಸಲಹೆ ನೀಡಿದ್ದು, ಇದನ್ನು ತಜ್ಞರ ಸಲಹೆಯೊಂದಿಗೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.