ಇಂದಿನ ಜನರ ಜೀವನದಲ್ಲಿ ಒತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಿನವರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಒತ್ತಡ ಹೆಚ್ಚಾದಾಗ ಬೊಜ್ಜು, ಮಧುಮೇಹ, ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಒತ್ತಡವನ್ನು ಈ ಸುಲಭವಾದ ವಿಧಾನಗಳ ಮೂಲಕ ನಿವಾರಿಸಿಕೊಳ್ಳಿ.
ಒತ್ತಡವನ್ನು ನಿವಾರಿಸಲು ಸ್ನಾನ ಮಾಡುವಾಗ ನೀವು ಗುಲಾಬಿ, ನಿಂಬೆ , ಮಲ್ಲಿಗೆ ಇತ್ಯಾದಿಗಳ ಪರಿಮಳಯುಕ್ತ ಎಣ್ಣೆಯನ್ನು ಬಳಸಿ. ಅವುಗಳನ್ನು ನೀರಿಗೆ ಮಿಕ್ಸ್ ಮಾಡಿ ಸ್ನಾನ ಮಾಡಿ. ಇವುಗಳ ಸುವಾಸನೆಗೆ ನರಗಳು ಶಾಂತಗೊಳ್ಳುತ್ತದೆ, ಒತ್ತಡ ಕಡಿಮೆಯಾಗುತ್ತದೆ.
ಗಿಡಮೂಲಿಕೆಗಳನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂಡ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ ಬ್ರಾಹ್ಮಿ ಅಥವಾ ಭೃಂಗರಾಜ್ ಎಣ್ಣೆಯನ್ನು ಬಳಸಿ.
ಒತ್ತಡವನ್ನು ನಿವಾರಿಸಲು ಒಂದು ಕಪ್ ನಲ್ಲಿ ಹಾಲಿನ ಪುಡಿ, ಸ್ವಲ್ಪ ಉಪ್ಪು, ಗುಲಾಬಿ ದಳಗಳು, ಗುಲಾಬಿ ಎಣ್ಣೆ, 2 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
ತಜ್ಞರು ಒತ್ತಡವನ್ನು ನಿವಾರಿಸಲು ಬಣ್ಣ ಬಣ್ಣದ ಮೇಣದಬತ್ತಿಯ ಬೆಳಕಿನಲ್ಲಿ ಕುಳಿತುಕೊಳ್ಳುವಂತೆ ಸಲಹೆ ನೀಡುತ್ತಾರೆ. ಮನೆಯಲ್ಲಿರುವ ಅಲಂಕಾರಿಕ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ಸುಗಂಧ ದ್ರವ್ಯ, ಗುಲಾಬಿ, ಕಿತ್ತಳೆ, ಚಂಪಾ, ಮಲ್ಲಿಗೆ ಇತ್ಯಾದಿಗಳ ಎಣ್ಣೆಯನ್ನು ಹಾಕಿಟ್ಟು, ಅದರ ಸುವಾಸನೆಯನ್ನು ಉಸಿರಾಡಿದರೆ ಒತ್ತಡ ನಿವಾರಣೆಯಾಗುತ್ತದೆಯಂತೆ.
ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ಒತ್ತಡದ ನರಗಳು ಶಾಂತಗೊಂಡು ದೇಹ ಮತ್ತು ಮನಸ್ಸಿನ ಒತ್ತಡ ದೂರವಾಗುತ್ತದೆ.