ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ ಬೀಸಿದೆ. ಈ ಕುರಿತು ಅಲ್ಲಿನ ರಾಜ್ಯಪಾಲರು ಹೇಳಿದ್ದಾರೆ.
ಕೆಂಟಕಿ ರಾಜ್ಯ ಸೇರಿದಂತೆ ಅಲ್ಲಿನ ಕೆಲವು ನಗರಗಳಲ್ಲಿಯೂ ಸುಂಟರಗಾಳಿ ಬೀಸಿ ಸಾಕಷ್ಟು ಹಾನಿ ಮಾಡಿದೆ. ಈ ಪೈಕಿ ಕೆಂಟಕಿ ಸುಂಟರಗಾಳಿಗೆ ಹೆಚ್ಚು ತೊಂದರೆ ಅನುಭವಿಸಿದೆ. ನನಗೂ ಇದರ ಭೀಕರತೆ ಕಂಡು ಭಯವಾಯಿತು. ಇತಿಹಾಸದಲ್ಲಿಯೇ ಇದು ಭೀಕರ ಸುಂಟರಗಾಳಿ. ಹೀಗಾಗಿ ರಾತ್ರಿಯೇ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ರಾಜ್ಯಪಾಲ ಆಂಡಿ ಬೆಶಿಯರ್ ತಿಳಿಸಿದ್ದಾರೆ.
ಮೇಣದಬತ್ತಿ ಕಾರ್ಖಾನೆಯ ಮೇಲ್ಛಾವಣೆಯೊಂದು ಕುಸಿದಿದ್ದು, ಕೆಲಸ ಮಾಡುತ್ತಿದ್ದ 100 ಜನ ಕಾರ್ಮಿಕರು ಸಿಲುಕಿದ್ದಾರೆ. ಬೆಳಿಗ್ಗೆಯವರೆಗೂ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ.