ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದಿರುವ ವಿರಾಟ್ ಕೊಹ್ಲಿ, ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಇನ್ಸ್ಟಾಗ್ರಾಮ್ನಲ್ಲಿ ಶುಭ ಹಾರೈಸಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಜೊತೆಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಅವರನ್ನು ತಮ್ಮ ಸ್ಪೂರ್ತಿ ಎಂದು ಕರೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತನ್ನ ಸಿಲ್ಲಿ ಜೋಕ್ಗಳನ್ನು ಮತ್ತು ಸೋಮಾರಿತನವನ್ನು ನಿಭಾಯಿಸಿದ್ದೀರಿ. ಅತ್ಯಂತ ಪ್ರಾಮಾಣಿಕ, ಪ್ರೀತಿಯ, ಧೈರ್ಯಶಾಲಿ ಮಹಿಳೆಯನ್ನು ಮದುವೆಯಾಗಿ 4 ವರ್ಷಗಳು ಉರುಳಿವೆ ಎಂದು ತಮ್ಮ ಪ್ರೀತಿಯ ಮಡದಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಕುಟುಂಬ ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ ಈ ದಿನವು, ಒಂದು ಕುಟುಂಬವಾಗಿ ಮೊದಲ ವಾರ್ಷಿಕೋತ್ಸವಕ್ಕಿಂತ ಹೆಚ್ಚು ವಿಶೇಷವಾಗಿದೆ. ಈ ಪುಟ್ಟ ಮಂಚ್ಕಿನ್ನೊಂದಿಗೆ ಜೀವನವು ಪೂರ್ಣಗೊಂಡಿದೆ. ತನ್ನ ಜೀವನವನ್ನು ಅನುಷ್ಕಾ ಪೂರ್ಣಗೊಳಿಸಿರುವುದಾಗಿ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕೊಹ್ಲಿ ಮತ್ತು ಅನುಷ್ಕಾ 2017 ರಲ್ಲಿ ವಿವಾಹವಾಗಿದ್ದು, ಇವರಿಗೆ ಜನವರಿ 11ರಂದು ಪುತ್ರಿ ವಮಿಕಾ ಜನಿಸಿದ್ದಾಳೆ.
https://www.instagram.com/p/CXVsDPotqA4/?utm_source=ig_web_copy_link