alex Certify ನಿಮ್ಮ ಮಗು ಆನ್ಲೈನ್ ಗೇಮಿಂಗ್‌ ವ್ಯಸನಿಯೇ…..? ಹಾಗಾದ್ರೆ ನಿಮಗೆ ತಿಳಿದಿರಲಿ ಶಿಕ್ಷಣ ಸಚಿವಾಲಯದ ಈ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮಗು ಆನ್ಲೈನ್ ಗೇಮಿಂಗ್‌ ವ್ಯಸನಿಯೇ…..? ಹಾಗಾದ್ರೆ ನಿಮಗೆ ತಿಳಿದಿರಲಿ ಶಿಕ್ಷಣ ಸಚಿವಾಲಯದ ಈ ಮಾರ್ಗಸೂಚಿ

ಇತ್ತೀಚಿನ ದಿನಗಳಲ್ಲಿ ತೀರಾ ಅಸಹನೀಯ ಮಟ್ಟದಲ್ಲಿ ಆನ್ಲೈನ್ ಹಾಗೂ ವಿಡಿಯೋ ಗೇಮ್‌ಗಳಿಗೆ ಮಕ್ಕಳು ಚಟ ಅಂಟಿಸಿಕೊಂಡಿರುವುದು ವಿಷಾದನೀಯ. ಈ ಚಟದಿಂದ ಬಿಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪೋಷಕರಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಒಂದಷ್ಟು ಮಾರ್ಗಸೂಚನೆಗಳನ್ನು ನೀಡಿದೆ.

ಸಾಂಕ್ರಮಿಕ ಅಂತ ಶಾಲೆಗಳನ್ನು ಮುಚ್ಚಿದ್ದರೆ ಮಕ್ಕಳು ಈ ಅವಧಿಯಲ್ಲಿ ಆನ್ಲೈನ್‌ ಗೇಮ್‌ಗಳನ್ನು ಆಡಿಕೊಂಡು ಹೆಚ್ಚಿನ ಕಾಲ ಕಳೆಯುತ್ತಿರುವ ಕಾರಣ ಅವರ ಮನೋಬೌದ್ಧಿಕ ಬೆಳವಣಿಗೆಯ ಮೇಲೆ ನಕಾರಾತ್ಮ ಪರಿಣಾಮ ಉಂಟಾಗುವ ಕಳವಳವನ್ನು ಸಚಿವಾಲಯ ವ್ಯಕ್ತಪಡಿಸಿದೆ.

ಒಮಿಕ್ರಾನ್ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ

ಈ ಪಿಡುಗನ್ನು ನಿಯಂತ್ರಿಸಲು ಶಿಕ್ಷಣ ಸಚಿವಾಲಯ ಕೊಟ್ಟಿರುವ ಕೆಲವೊಂದು ಸಲಹೆಗಳು ಇಂತಿವೆ:

* ನಿಮ್ಮ ಮಕ್ಕಳನ್ನು ಲ್ಯಾಪ್ಟಾಪ್ ಅಥವಾ ಮೊಬೈಲ್ ಮೂಲಕ ಯಾವುದೇ ಗೇಮ್ ಗಳನ್ನು ಖರೀದಿ ಮಾಡಲು ಅವಕಾಶ ನೀಡಬೇಡಿ. ಅಪರಿಚಿತ ಲಿಂಕ್‌ಗಳ ಮೂಲಕ ಸಾಫ್ಟ್‌ವೇರ್‌ ಅಥವಾ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡದಂತೆ ಮಕ್ಕಳಲ್ಲಿ ಅರಿವು ಮೂಡಿಸಿ. ಗೇಮ್‌ಗಳನ್ನು ಡೌನ್ಲೋಡ್ ಮಾಡುವಾಗ ವೈಯಕ್ತಿಕ ವಿವರಗಳನ್ನು ಕೊಡದೇ ಇರಲು ಅವರಿಗೆ ತಿಳಿಸಿ.

* ಅಪರಿಚಿತರೊಂದಿಗೆ ಆನ್ಲೈನ್‌ನಲ್ಲಿ ಸಂಪರ್ಕ ಸಾಧಿಸದಂತೆ ಜಾಗೃತಿ ಮೂಡಿಸಿ. ಅಪರಿಚಿತರು ಮಕ್ಕಳನ್ನು ಆನ್ಲೈನ್ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿಗೆ ತಡೆಯೊಡ್ಡಬೇಕು. ಸುದೀರ್ಘಾವಧಿಗೆ ಗೇಮ್‌ ಆಡಿಕೊಂಡು ಕೂರದಂತೆ ಮಕ್ಕಳನ್ನು ನೋಡಿಕೊಳ್ಳಿ.

* ಆನ್ಲೈನ್ ಗೇಮ್ಸ್ ಆಡುವ ಸಂದರ್ಭದಲ್ಲಿ, ನಿಮ್ಮ ಮಕ್ಕಳು ತನ್ನ ಖಾಸಗಿತನ ಕಾಪಾಡಿಕೊಳ್ಳುವುದು ಹೇಗೆಂದು ತಿಳಿಸಿ ಹೇಳಿ. ತಮ್ಮ ನಿಜನಾಮ ತೋರ್ಪಡಿಸದಂತೆ ಸ್ಕ್ರೀನ್‌ನಾಮವೊಂದನ್ನು ಇಟ್ಟುಕೊಂಡು ಆಟವಾಡಲು ಅವರಿಗೆ ತಿಳಿಸಿ. ಫೈರ್‌ವಾಲ್ ಬಳಸಿಕೊಂಡು ವೆಬ್‌ ಬ್ರೌಸರ್‌ಗಳನ್ನು ಭದ್ರವಾಗಿಡಿ, ಆಂಟಿವೈರಸ್‌/ಸ್ಪೈವೇರ್‌ಗಳನ್ನು ನಿಮ್ಮ ಕಂಪ್ಯೂಟರ್‌ಗಳಿಗೆ ಅಳವಡಿಸಿ.

* ಆನ್ಲೈನ್‌ನಲ್ಲಿ ಬರುವ ಕಿರುಕುಳ ಅಥವಾ ಬೆದರಿಕೆಯ ಸಂದೇಶಗಳಿಗೆ ಪ್ರತಿಕ್ರಿಯೆ ಕೊಡದೇ ಇರಲು ನಿಮ್ಮ ಮಕ್ಕಳಿಗೆ ತಿಳಿಸಿ. ಇಂಥ ಕಿರಿಕಿರಿ ಮಂದಿ ಏನಾದರೂ ತಮ್ಮ ಆಟಗಾರರ ಪಟ್ಟಿಯಲ್ಲಿದ್ದರೆ ಅವರನ್ನು ಬ್ಲಾಕ್ ಮಾಡಲು ತಿಳಿಸಿ. ಕೌಟುಂಬಿಕ ಸ್ಥಳದಲ್ಲಿ ಇಡಲಾದ ಕಂಪ್ಯೂಟರ್‌ ಮೂಲಕವೇ ಮಕ್ಕಳು ಆಟವಾಡುವಂತೆ ನೋಡಿಕೊಳ್ಳಿ.

* ಜೂಜಾಟ ಹಾಗೂ ಗೇಮ್‌ಗಳ ಅತಿಯಾದ ಚಟದಿಂದ ಯಾವ ಮಟ್ಟದಲ್ಲಿ ಮನೆ/ಮನಗಳು ಹಾಳಾಗುತ್ತವೆ ಎಂಬ ಬಗ್ಗೆ ಅರಿವು ಮೂಡಿಸಿ.

* ತಮ್ಮ ವಿದ್ಯಾರ್ಥಿಗಳ ವರ್ತನೆಗಳ ಮೇಲೆ ಶಿಕ್ಷಕರು ಯಾವಾಗಲೂ ಕಣ್ಣಿಟ್ಟಿರಬೇಕು. ಅಂತರ್ಜಾಲದ ಉಪಯೋಗ ಹಾಗೂ ಅಪಾಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಶಿಕ್ಷಕರು ಯತ್ನಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...