ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ.
ಅಲ್ಲದೇ, ತಿಂಗಳ ಕೊನೆಯಲ್ಲಿ ಇದು ಅತೀ ಪ್ರಕಾಶಮಾನವಾಗಿ ಗೋಚರಿಸಲಿದೆ. ಇದು ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿಗೆ ಗೋಚರಿಸಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಡಿ. 12ರಂದು ಈ ಧೂಮಕೇತು ಭೂಮಿಗೆ ಸಮೀಪಿಸುತ್ತಿದೆ. ಇದು ಭೂಮಿಯಿಂದ ಸುಮಾರು 523 ಶತಕೋಟಿ ಕಿ.ಮೀ ದರದಲ್ಲಿ ಇದೆ ಎನ್ನಲಾಗಿದೆ. ಈ ಧೂಮಕೇತುವನ್ನು ಖಗೋಳ ವಿಜ್ಞಾನಿ ಗ್ರೆಗೊರಿ ಜೆ. ಲಿಯೋನಾರ್ಡ್ ಕಂಡು ಹಿಡಿದಿದ್ದಾರೆ. ಇದಕ್ಕೆ ಸಿ/2021/ಎ1 ಎಂದು ಕರೆಯಲಾಗಿದೆ.
ಈ ಧೂಮಕೇತು ಸೌರವ್ಯೂಹದಲ್ಲಿನ ಉತ್ತರ ಹಾಗೂ ಪೂರ್ವ ದಿಕ್ಕಿನ ನಡುವೆ ಕಾಣುವ ಸಪ್ತರ್ಷಿ ಮಂಡಲ ಹಾಗೂ ಬೂಟಿಸ್ ನಕ್ಷತ್ರ ಪುಂಜಗಳ ಹತ್ತಿರ ಕಾಣಿಸಲಿದೆ. ಇದು ಸೌರವ್ಯೂಹದ ಅಂಚಿನಲ್ಲಿರುವ ಕೈಪರ್ ಪಟ್ಟಿಯಿಂದ ಹೊರ ಬಂದು 523 ಶತಕೋಟಿ ಕಿ.ಮೀ ವರೆಗೆ ಸಂಚಾರ ಮಾಡಿದೆ.
ಎರಡು ವಾರಗಳ ಹಿಂದೆ ಈ ಧೂಮಕೇತು ಸೂರ್ಯನಿಗೆ ಅತೀ ಸಮೀಪ ಹೋಗಿತ್ತು. ಹಲವು ವರ್ಷಗಳಿಂದ ಇದು ಕಾಣಿಸದೆ ಸಂಚಾರ ನಡೆಸುತ್ತಿದೆ. ಇದರ ಒಳಗೆ ಘನೀಕೃತ ಕಾರ್ಬನ್ ಡೈ ಆಕ್ಸೈಡ್, ಸಾರಜನಕ ಹಾಗೂ ಕಾರ್ಬನ್ ಮೊನಾಕ್ಸೈಡ್ ಇದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಭೂಮಿಯ ವಾತಾವರಣದಿಂದ ದೂರ ಹೋದಂತೆಲ್ಲ ಅದರ ಒಳಗಿನ ವಸ್ತುಗಳು ಕರಗಿ ಆವಿಯಾಗುತ್ತ ಧೂಮಕೇತುವಿನ ಬಾಲ ದೊಡ್ಡದಾಗುತ್ತ ಸಾಗುತ್ತದೆ. ಇದು ಜನವರಿಯಲ್ಲಿ ಸೂರ್ಯನ ಹತ್ತಿರ ಹೋಗಿ ತನ್ನ ಸ್ವಸ್ಥಾನಕ್ಕೆ ಹಿಂದಿರುಗಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.