ಚೆನ್ನೈ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಕ್ಕೆ ಮೊದಲು ಮಾರ್ಗ ಪರಿಶೀಲನೆ ಕುರಿತಂತೆ ಸೇನಾ ಅಧಿಕಾರಿಗಳು ಗೊಂದಲದ ಹೇಳಿಕೆ ನೀಡಿದ್ದಾರೆ.
ಬಿಪಿನ್ ರಾವತ್ ಅವರು ವೆಲ್ಲಿಂಗ್ಟನ್ ಗೆ ಪ್ರಯಾಣಿಸುವ ಮೊದಲು ಆ ಮಾರ್ಗದಲ್ಲಿ ಭದ್ರತೆ ದೃಷ್ಟಿಯಿಂದ ಇತರೆ ಕಾಪ್ಟರ್ ಗಳ ಪೂರ್ವ ಸಂಚಾರ ನಡೆದ ಬಗ್ಗೆ ಅಧಿಕಾರಿಗಳಿಂದ ಗೊಂದಲದ ಹೇಳಿಕೆ ವ್ಯಕ್ತವಾಗಿದೆ. ಅತಿ ಗಣ್ಯರ ಪ್ರಯಾಣಕ್ಕೆ ಮೊದಲು ಪರೀಕ್ಷಾರ್ಥ ಪೂರ್ವ ಸಂಚಾರ ನಡೆಸಲಾಗುತ್ತದೆ. ಹವಾಮಾನ ಪರೀಕ್ಷೆಗಾಗಿ ಇಂತಹ ಸಂಚಾರವನ್ನು ನಡೆಸಲಾಗುವುದು.
ಬಿಪಿನ್ ರಾವತ್ ಅವರು ಡಿಸೆಂಬರ್ 8 ರಂದು ಕಾಪ್ಟರ್ ಮೂಲಕ ವೆಲ್ಲಿಂಗ್ಟನ್ ಗೆ ಪ್ರಯಾಣಿಸುವ ಮೊದಲು ಇಂತಹುದೇ ಪೂರ್ವ ಸಂಚಾರವನ್ನು 2 ಕಾಪ್ಟರ್ ಗಳು ಕೈಗೊಂಡಿದ್ದವು. ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್ ಗೆ ತೆರಳಿದ್ದವು. ಆದರೆ, ವೆಲ್ಲಿಂಗ್ಟನ್ ನಲ್ಲಿ ಆ ಕಾಪ್ಟರ್ ಗಳು ಭೂಸ್ಪರ್ಶ ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಇಲ್ಲವೆಂದು ಸೂಳೂರು ವಾಯುನೆಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಎಂಐ 17 –ವಿ 5 ಅತ್ಯಂತ ಅತ್ಯಂತ ವಿಶ್ವಾಸಾರ್ಹ ಹೆಲಿಕಾಪ್ಟರ್ ಆಗಿರುವುದರಿಂದ ಸಂಚಾರಕ್ಕೆ ಮೊದಲು ಮಾರ್ಗ ಪರಿಶೀಲನೆಗೆ ಯಾವುದೇ ಪೂರ್ವ ಸಂಚಾರ ನಡೆಸಿರಲಿಲ್ಲ ಎಂದು ಮದ್ರಾಸ್ ರೆಜಿಮೆಂಟಲ್ ಸೆಂಟರ್ ಅಧಿಕಾರಿ ಹೇಳಿದ್ದಾರೆ.