ಮಗಳಿಗೆ ಚಹಾ ಮಾಡುವುದು ಹೇಗೆ ಎಂದು ಹೇಳಿಕೊಟ್ಟ ವೈದ್ಯ: ಹಾರ್ಲಿಕ್ಸ್ ತರಹ ಇದೆ ಅಂದ್ರು ನೆಟ್ಟಿಗರು..! 11-12-2021 7:08AM IST / No Comments / Posted In: Latest News, Live News, International ಬೆಳಗೆದ್ದು ಯಾರ ಮುಖ ನೋಡ್ತೀರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಬಹುತೇಕರಿಗೆ ಚಹಾ ಕುಡಿಯದಿದ್ದರೆ ಆ ದಿನ ಪರಿಪೂರ್ಣವೇ ಆಗೋದಿಲ್ಲ. ಚಹಾವು ಹಲವು ಮಂದಿಯ ನೆಚ್ಚಿನ ಪಾನೀಯವಾಗಿದೆ. ಮಸಾಲಾ ಟೀ, ಬ್ಲಾಕ್ ಟೀ, ಗ್ರೀನ್ ಟೀ, ಲೆಮನ್ ಟೀ, ತಂದೂರಿ ಟೀ ಹೀಗೆ ಹಲವಾರು ಶೈಲಿಯಲ್ಲಿ ಚಹಾವನ್ನು ತಯಾರಿಸುತ್ತಾರೆ. ಇದೀಗ, ಯುಎಸ್ ಮೂಲದ ನರಶಸ್ತ್ರಚಿಕಿತ್ಸಕ ಡಾ. ಸಂಜಯ್ ಗುಪ್ತಾ ಅವರು ತಮ್ಮ ಮಗಳಿಗೆ ಚಹಾವನ್ನು ಹೇಗೆ ಮಾಡುವುದು ಎಂದು ಹೇಳಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಸಿಎನ್ಎನ್ ನ ಮುಖ್ಯ ವೈದ್ಯಕೀಯ ವರದಿಗಾರ ಗುಪ್ತಾ ಅವರು ತಮ್ಮ ತಾಯಿಯಿಂದ ಕಲಿತ ಚಹಾ ಪಾಕವಿಧಾನವನ್ನು ತಮ್ಮ ಮಗಳಿಗೆ ಕಲಿಸಿದ್ದಾರೆ. ಮೂರೂವರೆ ನಿಮಿಷಗಳ ವಿಡಿಯೋದಲ್ಲಿ ಅವರು ಕಂದು ಸಕ್ಕರೆ, ನುಣ್ಣಗೆ ಕತ್ತರಿಸಿದ ಶುಂಠಿ, ಏಲಕ್ಕಿ ಮತ್ತು ಕಪ್ಪು ಚಹಾದ ಚೀಲಗಳನ್ನು ಬಳಸುವುದನ್ನು ತೋರಿಸಿದ್ದಾರೆ. ಮೊದಲಿಗೆ ಏಲಕ್ಕಿ ಮತ್ತು ಶುಂಠಿಯೊಂದಿಗೆ ನೀರನ್ನು ಕುದಿಸುತ್ತಾರೆ. ಆದರ, ನಂತರ ಚಹಾ ಚೀಲಗಳನ್ನು ಸೇರಿಸಿದ್ದಾರೆ. ಇದು ಚೆನ್ನಾಗೆ ಕುದಿದ ನಂತರ ಹಾಲನ್ನು ಸೇರಿಸಿ ಮಿಕ್ಸ್ ಮಾಡಿದ್ದಾರೆ. ನಂತರ ಇದನ್ನು ಸೋಸಿ ಚಹಾ ಕಪ್ ಗೆ ಹಾಕಿ ಮೂವರು ಕೂಡ ಸವಿದಿದ್ದಾರೆ. ಆದರೆ, ನೆಟ್ಟಿಗರು ಈ ರೀತಿಯ ಚಹಾ ತಯಾರಿಸುವ ವಿಧಾನದಿಂದ ಪ್ರಭಾವಿತರಾದಂತೆ ಕಂಡುಬಂದಿಲ್ಲ. ಅದು ಚಹಾ ಅಲ್ಲ, ಹಾರ್ಲಿಕ್ಸ್ ನಂತೆ ಕಾಣುತ್ತದೆ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ. Continuing family tradition, Dr. Sanjay Gupta teaches his daughters the chai recipe he learned from his mother. https://t.co/wVDFVQ6l67 pic.twitter.com/M4gxsjGxqu — CNN (@CNN) December 9, 2021