alex Certify ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಠಿಣ ಕಾನೂನಿನ ಮಧ್ಯೆಯೂ ಇನ್ನೂ ನಿಲ್ಲುತ್ತಿಲ್ಲ ‘ಬಾಲ್ಯ ವಿವಾಹ’

ಜೈಪುರ: ದೇಶದಲ್ಲಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೂ ಬಾಲ್ಯ ವಿವಾಹ ಪದ್ಧತಿ ಮಾತ್ರ ತೊಲಗಿಸಲಾಗುತ್ತಿಲ್ಲ ಎಂಬುವುದು ನೋವಿನ ಸಂಗತಿಯಾಗುತ್ತಿದೆ.

ಹಲವು ರಾಜ್ಯಗಳಲ್ಲಿ ಬಾಲ್ಯ ವಿವಾಹ ಹತೋಟಿಗೆ ಬಂದಿದ್ದರೂ ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಇದು ಇನ್ನೂ ಆಚರಣೆಯಲ್ಲಿದೆ.

ಬಾಲ್ಯ ವಿವಾಹದಲ್ಲಿ ತೊಡಗಿದವರಿಗೆ ಕಠಿಣ ಕಾನೂನು ಜಾರಿಗೊಳಿಸಿದ್ದರೂ ಕದ್ದು ಮುಚ್ಚಿ ಮದುವೆಗಳು ನಡೆಯುತ್ತಲೇ ಇವೆ. ಆದರೆ, ಈ ರಾಜ್ಯಗಳಲ್ಲಿ ಬಾಲ್ಯ ವಿವಾಹ ನಡೆಸಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು ವಿಪರ್ಯಾಸ. ಬುದ್ಧಿ ಜೀವಿಗಳು ಇದಕ್ಕೆ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಸ್ಥಾನದ ಬಿಲ್ವಾರಾದಲ್ಲಿ ಬಾಲ್ಯ ವಿವಾಹಗಳು ಜಾರಿಯಲ್ಲಿವೆ ಎಂದು ತೋರಿಸುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಾಹಿತಿಯಂತೆ ಅಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅಲ್ಲಿ ನಾಲ್ವರು ಮಕ್ಕಳಿಗೆ ಬಾಲ್ಯ ವಿವಾಹ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ದಾಳಿ ಮಾಡಿ ನಿಲ್ಲಿಸಿದೆ. ವಿವಾಹಕ್ಕೆ ಸಿದ್ಧಗೊಳಿಸಿದ್ದ ಮಕ್ಕಳ ವಯಸ್ಸು ಕೇವಲ 10 ರಿಂದ 12 ವರ್ಷ. ಲೋಕದ ಜ್ಞಾನವೇ ಇಲ್ಲದ ಮಕ್ಕಳಿಗೆ ಮದುವೆ ಮಾಡಲು ಮುಂದಾಗಿರುವ ಪಾಲಕರ ಮನಸ್ಥಿತಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

UNICEF ನಡೆಸಿದ ಸಮೀಕ್ಷೆ ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಆ ಸಮೀಕ್ಷೆಯ ಪ್ರಕಾರ 2019ನ್ನು 2020ಕ್ಕೆ ಹೊಲಿಸಿದರೆ ಶೇ.50ರಷ್ಟು ಬಾಲ್ಯ ವಿವಾಹ ಹೆಚ್ಚಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...