ಮನೆ ಬಾಗಿಲನ್ನು ಕ್ಲೋಸ್ ಮಾಡಿ ಬಂದಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ಡಿ, ನಾನು ಜೆಡಿಎಸ್ ಬಾಗಿಲು ಹಾಕಿಕೊಂಡು ಬಂದ ಬಳಿಕ ಅವರು ಬಾಗಿಲು ತೆಗೆದಿದ್ದಾರೋ ಏನು ಮಾಡಿದ್ದಾರೆ ಗೊತ್ತಿಲ್ಲ. ಪರಿಷತ್ ಚುನಾವಣೆ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಭಾರತದ ರಸ್ತೆಗಿಳಿಯಲು BMW ನ ಎಲೆಕ್ಟ್ರಿಕ್ ಎಸ್ಯುವಿ ಸಜ್ಜು
ಪರಿಷತ್ ಚುನಾವಣೆಯಲ್ಲಿ ಕಳಂಕಗಳು ನಡೆದಿವೆ. ತಜ್ಞರು, ಬುದ್ಧಿಜೀವಿಗಳು ಆಯ್ಕೆಯಾಗಬೇಕು. ಆದರೆ ದುಡ್ದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವಂತಾಗಿದೆ. ಮೈಸೂರಿನಲ್ಲಿ ಮಂಜುನಾಥ ಸ್ವಾಮಿ ಬೆಳ್ಳಿ ಕಾಯಿನ್, ಜೊತೆಗೆ ಉಪ್ಪು ಮಾರಿ, ಕೂದಲು ಇಟ್ಟು ಆಣೆ ಪ್ರಮಾಣ ಮಾಡಿ ವೋಟ್ ಹಾಕಿಸಿಕೊಂಡಿದ್ದಾರೆ. ಇದು ಪರಿಷತ್ ಪಾವಿತ್ರ್ಯತೆಗೆ ಕಳಂಕ ತರುವ ಕೆಲಸವಲ್ಲವೇ? ಎಂದು ಪ್ರಶ್ನಿಸಿದ್ದಾರೆ.