ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸದ್ಯ 57 ವರ್ಷ ವಯಸ್ಸು. ಈ ಸಮಯದಲ್ಲಿ ಅವರು 7ನೇ ಮಗುವಿನ ತಂದೆಯಾಗಿದ್ದಾರೆ.
ಅವರ ಮೂರನೇ ಪತ್ನಿ ಕ್ಯಾರಿ ಲಂಡನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೋರಿಸ್ ಜಾನ್ಸನ್ ರ ಎರಡನೇ ಪತ್ನಿ ಮರೀನಾಗೆ ನಾಲ್ಕು ಮಕ್ಕಳಿದ್ದಾರೆ.
ಪ್ರಧಾನಿ ಹಾಗೂ ಕ್ಯಾರಿ ಇದೇ ವರ್ಷದ ಮೇನಲ್ಲಿ ವಿವಾಹವಾಗಿದ್ದರು. 57 ವರ್ಷದ ಬ್ರಿಟನ್ ಪ್ರಧಾನಿ ಮೂರನೇ ವಿವಾಹವಾಗಿದ್ದರು. ಅದೂ ಅವರಿಗಿಂತಲೂ 23 ವರ್ಷ ಚಿಕ್ಕವರೊಂದಿಗೆ ಮದುವೆಯಾಗಿದ್ದರು. ಅಲ್ಲದೇ, 2019ರಿಂದಲೂ ಕ್ಯಾರಿ ಹಾಗೂ ಬೋರಿಸ್ ಜಾನ್ಸನ್ ಇಬ್ಬರು ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಆ ನಂತರ ವಿವಾಹವಾಗುವುದಾಗಿ ಘೋಷಿಸಿದ್ದರು.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಬರಹಗಾರ ಹಾಗೂ ರಾಜಕಾರಣಿ. ಅಲ್ಲಿನ ಹಲವು ಸ್ಥಳೀಯ ಚುನಾವಣೆ ಗೆಲ್ಲುತ್ತ. 2019ರಲ್ಲಿ ದೇಶದ ಪ್ರಧಾನಿಯಾಗಿದ್ದಾರೆ.