ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಮುಂದಾಗಿದೆ.
24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್.ಬಿ.ಐ. ಭರವಸೆ ಕೊಟ್ಟಿದೆ. ಸಂಪೂರ್ಣ ಡಿಜಿಟಲ್ ಆಗಿರುವ ಈ ಪ್ರಕ್ರಿಯೆಯಲ್ಲಿ ಸಾಲ ಕೇಳುವಾತ ಬ್ಯಾಂಕಿನ ಯಾವುದೇ ಶಾಖೆಗೆ ಭೇಟಿ ಕೊಟ್ಟು ದೈಹಿಕ ದಾಖಲೆಗಳನ್ನು ಪ್ರಸ್ತುತಪಡಿಸಬೇಕಿಲ್ಲ.
ಹಬ್ಬದ ಮಾಸಕ್ಕೆಂದು ಆಫರ್ ನೀಡುತ್ತಿರುವ ಎಸ್.ಬಿ.ಐ, ವೈಯಕ್ತಿಕ ಸಾಲ ಪಡೆಯುವ ಮಂದಿಗೆ ನೀಡುವ ಸಾಲದ ಮೇಲಿನ ಪರಿಷ್ಕರಣಾ ಶುಲ್ಕದ ಮೇಲೆ 100% ವಿನಾಯಿತಿ ನೀಡುತ್ತಿದೆ.
BIG NEWS: ಬಿಪಿನ್ ರಾವತ್ ಸಾವು ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ; ಸಿಎಂ ಖಡಕ್ ಎಚ್ಚರಿಕೆ
ಬ್ಯಾಂಕುಗಳು ತಮ್ಮ ಕ್ಲೈಂಟ್‌ಗಳಿಗೆ ಪೂರ್ವಾನುಮೋದಿತ ಸಾಲಗಳು, ವೈಯಕ್ತಿಕ ಸಾಲಗಳನ್ನು ಸಾಮಾನ್ಯವಾಗಿ ಒಳ್ಳೆಯ ಮರುಪಾವತಿಯ ಇತಿಹಾಸದ ಟ್ರಾಕ್ ರೆಕಾರ್ಡ್ ಆಧಾರದ ಮೇಲೆ ವಿತರಿಸುತ್ತವೆ.
ನಿಮಗೂ ಸಹ ಈ ಪೂರ್ವಾನುಮೋದಿತ ವೈಯಕ್ತಿಕ ಸಾಲವನ್ನು ಎಸ್.ಬಿ.ಐನಿಂದ ಪಡೆಯಬೇಕಿದ್ದಲ್ಲಿ, ”PAPL” ಎಂದು 567676 ಸಂದೇಶ ಕಳುಹಿಸಿ ಸಾಲ ಪಡೆಯಲು ನೀವು ಎಷ್ಟು ಅರ್ಹರು ಎಂದು ತಿಳಿಯಬಹುದಾಗಿದೆ.
ಯೋನೋ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವುದು ಹೇಗೆ…?
1. ಯೋನೋಗೆ ಲಾಗಿನ್ ಆಗಿ.
2. Avail Now ಮೇಲೆ ಕ್ಲಿಕ್ ಮಾಡಿ.
3. ಸಾಲದ ಮೊತ್ತ ಹಾಗೂ ಅವಧಿ ಆಯ್ಕೆ ಮಾಡಿಕೊಳ್ಳಿ.
4. ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಸ್ವೀಕರಿಸಿದ ಓಟಿಪಿ ಎಂಟರ್ ಮಾಡಿ