alex Certify ಕೋವಿಡ್ ಲಸಿಕೆಗಿಂತಲೂ ಹೆಚ್ಚು ಸರ್ಚ್ ಆಗಿದೆ ʼಐಪಿಎಲ್‌ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆಗಿಂತಲೂ ಹೆಚ್ಚು ಸರ್ಚ್ ಆಗಿದೆ ʼಐಪಿಎಲ್‌ʼ

ಕೋವಿಡ್ ಸಾಂಕ್ರಮಿಕದ ನಡುವೆಯೂ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆಯು ಮಿಕ್ಕೆಲ್ಲಾ ಘಟನಾವಳಿಗಿಂತ ಹೆಚ್ಚು ಜನಪ್ರಿಯ ಸ್ಥಾನಮಾನದಲ್ಲಿದೆ.

ಗೂಗಲ್ ಇಂಡಿಯಾದ ’ಇಯರ್‌ ಇನ್ ಸರ್ಚ್ 2021’ ಸಮೀಕ್ಷೆ ಪ್ರಕಾರ, ಈ ವರ್ಷದಲ್ಲಿ ಅತ್ಯಂತ ಹೆಚ್ಚು ಟ್ರೆಂಡ್ ಆದ ಇವೆಂಟ್‌ಗಳಾಗಿ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಹಾಗೂ ಐಸಿಸಿ ಟಿ20 ವಿಶ್ವಕಪ್‌ಗಳು ಸ್ಥಾನ ಪಡೆದಿವೆ. ಕೋವಿಡ್-19 ಲಸಿಕೆ ಹಾಗೂ ಕೋವಿನ್ ಪೋರ್ಟಲ್‌‌ ಗಳಿಗಿಂತಲೂ ಕ್ರಿಕೆಟ್‌ನ ಘಟನಾವಳಿಗಳೇ ಟ್ರೆಂಡಿಂಗ್ ಪಟ್ಟಿಯಲ್ಲಿ ಮುಂದಿವೆ.

ಅತ್ಯಂತ ಹೆಚ್ಚು ಶೋಧಿಸಲ್ಪಟ್ಟ ಕ್ರೀಡಾ ಘಟನಾವಳಿ ಐಪಿಎಲ್‌ ಆಗಿದ್ದು, ಇದರ ಹಿಂದೆ ಕೋವಿನ್, ಐಸಿಸಿ ಟಿ20 ವಿಶ್ವಕಪ್, ಯೂರೋ ಕಪ್‌, ಟೋಕಿಯೋ ಒಲಿಂಪಿಕ್ಸ್‌ ಹಾಗೂ ಕೋವಿಡ್-19 ಲಸಿಕೆಗಳು ಟ್ರೆಂಡಿಂಗ್ ಕ್ವೈರಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಅತ್ಯಂತ ಹೆಚ್ಚು ಸರ್ಚ್ ಮಾಡಲ್ಪಟ್ಟ ಸುದ್ದಿ ಘಟನಾವಳಿಗಳು

ಟೋಕಿಯೋ ಒಲಿಂಪಿಕ್ಸ್‌, ಬ್ಲಾಕ್ ಫಂಗಸ್, ಅಫ್ಘಾನಿಸ್ತಾನ, ಪಶ್ಚಿಮ ಬಂಗಾಳ ಚುನಾವಣೆ, ಉಷ್ಣವಲಯದ ಚಂಡಮಾರುತ ತೌಕ್ತೇ ಮತ್ತು ಲಾಕ್‌ಡೌನ್.

ಟಾಪ್ ಟ್ರೆಂಡಿಂಗ್ ಚಿತ್ರಗಳು

ತಮಿಳಿನ ’ಜೈ ಭೀಂ’ ಸಿನೆಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಬಾಲಿವುಡ್‌ ಬ್ಲಾಕ್‌ಬಸ್ಟರ್‌ಗಳಾದ ’ಶೇರ್‌ಶಾ’, ’ರಾಧೆ’ ಮತ್ತು ’ಬೆಲ್‌ಬಾಟಂ’ಗಳು ನಂತರದ ಸ್ಥಾನದಲ್ಲಿವೆ. ಹಾಲಿವುಡ್‌ನ ’ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಮತ್ತು ’ಎಟರ್ನಲ್ಸ್‌’ಗಳೂ ಸಹ 2021ರಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುವ ಚಿತ್ರಗಳ ಪಟ್ಟಿಯಲ್ಲಿವೆ.

ಇದೇ ವೇಳೆ, ಕೋವಿಡ್-19ನ ಎರಡನೇ ಅಲೆಯು ಏಪ್ರಿಲ್ ಹಾಗೂ ಮೇನಲ್ಲಿ ಮರಣ ಮೃದಂಗ ಬಾರಿಸುತ್ತಾ ಸಾಗಿದ್ದ ವೇಳೆ, ’ಹೌ ಟು’ ಸೆಕ್ಷನ್‌ನಲ್ಲಿ ’ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಹೆಚ್ಚಿಸುವುದು ಹೇಗೆ’, ’ಮನೆಯಲ್ಲಿ ಆಮ್ಲಜನಕ ಉತ್ಪಾದಿಸುವುದು ಹೇಗೆ’, ಮತ್ತು ’ಕೋವಿಡ್ ಲಸಿಕೆ ನೋಂದಣಿಯಾಗುವುದು ಹೇಗೆ’ ಕ್ವೈರಿಗಳು ಅಗ್ರ ಸ್ಥಾನದಲ್ಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...