ಜಿನೇವಾ: ಕೊರೋನಾ ರೂಪಾಂತರ ಒಮಿಕ್ರಾನ್ ನಿಯಂತ್ರಿಸಲು ಬೂಸ್ಟರ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೂಸ್ಟರ್ ಡೋಸ್ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ.
ಕೊರೋನಾದಿಂದ ರಕ್ಷಣೆ ಪಡೆಯಲು ಲಸಿಕೆ ನೀಡಲಾಗುತ್ತಿದೆ. ಒಮಿಕ್ರಾನ್ ಬಳಿಕ ಬೂಸ್ಟರ್ ಡೋಸ್ ನೀಡಬೇಕೆಂಬ ಚರ್ಚೆ ನಡೆದಿದ್ದು, ವೃದ್ಧರು ಮತ್ತು ನಿಷ್ಕ್ರಿಯಗೊಳಿಸಿದ ವೈರಸ್ ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.
ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮೂರನೇ ಡೋಸ್ ನೀಡುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಷ್ಕ್ರಿಯಗೊಳಿಸಿದ ವೈರಸ್ ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಶಿಫಾರಸು ಮಾಡಿದ್ದು, ಭಾರತ್ ಬಯೋಟೆಕ್ ಇದೇ ತಂತ್ರಜ್ಞಾನದ ಮೂಲಕ ಲಸಿಕೆ ತಯಾರಿಸಿದೆ. ಹೀಗಾಗಿ ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮೂರನೇ ಡೋಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.