alex Certify ಗಂಡನ ಮನೆಗೆ ಹೋಗುವಾಗ ವಧು ಮಾಡಿದ್ದೇನು ಗೊತ್ತಾ…? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಮನೆಗೆ ಹೋಗುವಾಗ ವಧು ಮಾಡಿದ್ದೇನು ಗೊತ್ತಾ…? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ..!

ಮದುವೆ ಅಂದ್ರೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಒಂದು ರೀತಿಯ ಸಂಭ್ರಮವಿರುತ್ತದೆ. ಆದರೆ, ಮದುವೆ ಸಂಪ್ರದಾಯಗಳೆಲ್ಲಾ ಮುಗಿದು ಗಂಡನ ಮನೆಗೆ ಹೊರಟಾಗ ವಧು ಗಳಗಳನೇ ಅಳೋದು ಸಾಮಾನ್ಯ. ಇಷ್ಟು ದಿನ ತನ್ನ ತಂದೆ-ತಾಯಿಯ ಜೊತೆಗಿದ್ದ ಆಕೆಗೆ ಹೊಸಮನೆ ಅಂದ್ರೆ ಭಯ, ಆತಂಕ ಇರೋದು ಸಹಜ.

ಆದರೆ, ಇಲ್ಲೊಬ್ಬಳು ವಧು ತನ್ನ ವಿದಾಯಿ ಸಮಾರಂಭದಲ್ಲಿ ಗಂಡನ ಮನೆಗೆ ನಗು-ನಗುತ್ತಾ, ನೃತ್ಯ ಮಾಡುತ್ತಾ ತೆರಳಿರುವ ವಿಡಿಯೋ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿನ ವಧುವನ್ನು ಮಾನಸಿ ಗೋಸ್ವಾಮಿ ಎಂದು ಗುರುತಿಸಲಾಗಿದೆ.

ವಿದಾಯ ಸಮಾರಂಭದಲ್ಲಿ ಎಲ್ಲರೂ ನಗುತ್ತಿರುವಾಗ ಆಕೆ ಸುಮ್ಮನೆ ಅಳುವಂತೆ ನಾಟಕ ಮಾಡಿ ನಕ್ಕಿದ್ದಾಳೆ. ನಂತರ ಎಲ್ಲರಿಗೂ ವಿದಾಯ ಹೇಳಿದ ಆಕೆ, ನಗು ನಗುತ್ತಲೇ ನೆರೆದಿದ್ದವರ ಬಳಿ ಮತ್ತು ಉದ್ದಕ್ಕೂ ನಗುತ್ತಲೇ ಕೈ ಬೀಸುತ್ತಾ, ನೃತ್ಯ ಮಾಡುತ್ತಾ ತೆರಳಿದ್ದಾಳೆ.

ವಿಟ್ಟಿ ವೆಡ್ಡಿಂಗ್ಸ್ ಎಂಬ ಪೇಜ್ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈ ಕ್ಲಿಪ್ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಧುವಿನ ನಗುಮುಖ ನೋಡಿದ ನೆಟ್ಟಿಗರು ಕೂಡ ಸಂತಸಪಟ್ಟಿದ್ದು, ಪ್ರೀತಿಯ ಹಾಗೂ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಬಾಕ್ಸ್ ಅನ್ನು ತುಂಬಿದ್ದಾರೆ.

https://www.youtube.com/watch?v=MAesY43YqD0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...