ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮದುವೆಯಾಗಲು ಒತ್ತಾಯಿಸಿದ ಕಾರಣಕ್ಕೆ ಗೆಳತಿಯನ್ನೇ ಯುವಕನೊಬ್ಬ ಹತ್ಯೆ ಮಾಡಿದ್ದಾರೆ.
ಪ್ರಮುಖ ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್ ಸ್ನೇಹಿತರಾದ ಸೌರಭ್ ಮತ್ತು ರಾಹುಲ್ ಕೂಡ ಯುವತಿಯನ್ನು ಕೊಂದು ಶವವನ್ನು ಗಂಗಾ ನದಿಯಲ್ಲಿ ಎಸೆಯಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೂವರು ಆರೋಪಿಗಳು ಯುವತಿಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಸ್ತಿನಾಪುರದ ಭೀಮಕುಂಡದ ಬಳಿ ಗಂಗಾದಿಂದ ಶವ ಹೊರತೆಗೆಯಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಹಸ್ತಿನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಫ್‌ಪುರ ಗ್ರಾಮದ ನಿವಾಸಿ ಕಾಂಚನ್ ಶರ್ಮಾ ಎಂಬ 22 ವರ್ಷದ ಯುವತಿ ಡಿಸೆಂಬರ್ 6 ರಂದು ನಾಪತ್ತೆಯಾಗಿದ್ದಳು.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸರು ಪ್ರಾವಿಷನ್ ಸ್ಟೋರ್ ಮಾಲೀಕ ರೋಹಿತ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬುಧವಾರ ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕಾಂಚನ್ ತನ್ನನ್ನು ಮದುವೆಯಾಗುವಂತೆ ರೋಹಿತ್‌ಗೆ ಒತ್ತಡ ಹೇರುತ್ತಿದ್ದಳು ನಂತರ ತನ್ನ ಸ್ನೇಹಿತರ ಸಹಾಯದಿಂದ ಕಾಂಚನ್ ಳನ್ನು ಕೊಲ್ಲಲು ನಿರ್ಧರಿಸಿದ ರೋಹಿತ್ ಇಂತಹ ಕೃತ್ಯವೆಸಗಿದ್ದಾನೆ.
ಕಾಂಚನ್ ಬಿಎ ವಿದ್ಯಾರ್ಥಿನಿಯಾಗಿದ್ದು, ಹಸ್ತಿನಾಪುರದಲ್ಲಿ ಕಂಪ್ಯೂಟರ್ ಕೋಚಿಂಗ್ ತರಗತಿಗೆ ಹೋಗುತ್ತಿದ್ದಳು. ಮೂರು ತಿಂಗಳ ಹಿಂದೆ, ಅವಳು ರೋಹಿತ್‌ನನ್ನು ಭೇಟಿಯಾದಳು. ಪರಿಚಯದ ನಂತರ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಕಾಂಚನ್ ರೋಹಿತ್ ಗೆ ಶಾಪಿಂಗ್‌ಗಾಗಿ 25,000 ರೂಪಾಯಿ ಖರ್ಚು ಮಾಡಿದ್ದಾಳೆ.
ಕಾಂಚನ್ ರೋಹಿತ್ ಮದುವೆಯಾಗುವಂತೆ ಕೇಳಲು ಪ್ರಾರಂಭಿಸಿದಾಗ, ಅವನು ಅವಳಿಂದ ದೂರವಾಗಲು ಯತ್ನಿಸಿದ್ದಾನೆ. ಬುಧವಾರ ಕಾಂಚನ್ ರೋಹಿತ್ ಗೆ ಕರೆ ಮಾಡಿದಾಗ ಕರೆಸಿಕೊಂಡು ಕಾರ್ ನಲ್ಲಿ ಕರೆದೊಯ್ದು ಕಾಡಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸ್ನೇಹಿತರ ಸಹಾಯದಿಂದ ಮೃತದೇಹವನ್ನು ನದಿಗೆ ಎಸೆದಿದ್ದಾರೆ ಎಸ್ಪಿ (ಗ್ರಾಮೀಣ) ಕೇಶವ್ ಕುಮಾರ್ ಹೇಳಿದ್ದಾರೆ.