ನವದೆಹಲಿ : ಮುಂದಿನ ವರ್ಷ ದೇಶದಿಂದ ಮಾನವ ಸಹಿತ ಗಗನ ಯಾನ ಆರಂಭಕ್ಕೂ ಮುನ್ನ ಮಾನವ ರಹಿತ ಮಿಷನ್ ಗಳ ಉಡಾವಣೆಯಾಗಲಿದೆ. ಇದಕ್ಕೆ ವಾಯುಮಿತ್ರ ಎಂದು ಹೆಸರಿಡಲಾಗಿದೆ. ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಈ ಕುರಿತು ಅವರು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದ್ದಾರೆ. 2022ರ ಅಂತ್ಯದ ವೇಳೆಗೆ ಗಗನ ಯಾನ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನ ಮಾನವ ರಹಿತ ಗಗನ ಯಾನ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾನವ ರಹಿತ ಮಿಷನ್ ನಲ್ಲಿ ರೊಬೋಟ್ ಗಳು ಇರಲಿವೆ. ಇದರ ಯಶಸ್ಸನ್ನು ಆಧರಿಸಿ 2023ರಲ್ಲಿ ಮಾನವ ಸಹಿತ ಗಗನ ಯಾನ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿಯಂತೆ 2022ರಲ್ಲಿ ಶುಕ್ರ ಮಿಷನ್, 23ರಲ್ಲಿ ಸೌರ ಮಿಷನ್ ಹಾಗೂ 2030ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆ ಸರ್ಕಾರದ್ದಾಗಿದೆ.