ಹೈದರಾಬಾದ್: ಬಸ್ಗಳಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವು (ಟಿಎಸ್ಆರ್ಟಿಸಿ), ಜೀವನಪರ್ಯಂತ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದೆ.
ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಇಬ್ಬರು ಮಕ್ಕಳಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಉಚಿತ ಜೀವಮಾನದ ಪಾಸ್ಗಳನ್ನು ಘೋಷಿಸಿದೆ. ನವೆಂಬರ್ 30ರಂದು ನಾಗರಕರ್ನೂಲ್ ಡಿಪೋಗೆ ಸೇರಿದ ಬಸ್ನಲ್ಲಿ ಪೆದ್ದಕೋತಪಲ್ಲಿ ಗ್ರಾಮದ ಬಳಿ ಹೆಣ್ಣು ಮಗು ಜನಿಸಿತ್ತು. ಡಿ.7 ರಂದು ಸಿದ್ದಿಪೇಟೆ ಬಳಿ ಇನ್ನೊಬ್ಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಇಬ್ಬರು ಮಹಿಳೆಯರು ಪ್ರತ್ಯೇಕ ಸ್ಥಳಗಳಿಗೆ ಅನಿರೀಕ್ಷಿತವಾಗಿ ಹೆರಿಗೆಗೆ ಒಳಗಾಗಿದ್ದಾರೆ. ಟಿಎಸ್ಆರ್ಟಿಸಿ ಸಿಬ್ಬಂದಿ ಸದಸ್ಯರು ಮತ್ತು ಸಹ ಪ್ರಯಾಣಿಕರು ಈ ಇಬ್ಬರು ಗರ್ಭಿಣಿಯರ ಹೆರಿಗೆಗೆ ಸಹಾಯ ಮಾಡಿದ್ದಾರೆ.
ನಂತರ, ಟಿಎಸ್ಆರ್ಟಿಸಿ ಸಿಬ್ಬಂದಿ ತಾಯಂದಿರು ಮತ್ತು ನವಜಾತ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಸ್ ಗಳಲ್ಲೇ ಇಬ್ಬರು ಮಕ್ಕಳು ಜನಿಸಿದ್ದರಿಂದ ಜೀವನಪರ್ಯಂತ ಉಚಿತ ಬಸ್ ಪ್ರಯಾಣದ ಉಡುಗೊರೆಯನ್ನು ನೀಡಲಾಗಿದೆ.
ಇನ್ನು ನವಜಾತ ಶಿಶುಗಳಿಗೆ ಟಿಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಉಚಿತ ಜೀವಮಾನದ ಪಾಸ್ಗಳನ್ನು ನೀಡಲು ಸಂತೋಷವಾಗಿದೆ ಎಂದು ಟಿಎಸ್ಆರ್ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಸಿ.ಸಜ್ಜನರ್ ಹೇಳಿದ್ದಾರೆ.