ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ಮನೆ ದರೋಡೆ ಪ್ರಕರಣಗಳಿಗಂತು ಲೆಕ್ಕವೇ ಇಲ್ಲ….. ದೇವರ ಹುಂಡಿ, ದೇವರಿಗೆ ಹಾಕಿದ್ದ ಆಭರಣಗಳನ್ನು ಕನ್ನ ಹಾಕುವ ಕಳ್ಳರು ಇದೀಗ ದೇವರ ಮೂರ್ತಿಯನ್ನೂ ಬಿಡುತ್ತಿಲ್ಲ.
ಸಾಧಾರಣ ಭಕ್ತನಂತೆ ದೇವಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬ ಭಕ್ತಿ-ಭಾವದಿಂದ ದೇವರಿಗೆ ಕೈ ಮುಗಿದು ಮೂರ್ತಿಯನ್ನೇ ಕದ್ದೊಯ್ದಿರುವ ಘಟನೆ ಬೆಳಗಾವಿಯ ಪಾಂಗೋಳ ಗಲ್ಲಿಯ ಅಶ್ವತ್ಥಾಮ ದೇವಸ್ಥಾನದಲ್ಲಿ ನಡೆದಿದೆ.
ದಕ್ಷಿಣ ಭಾರತದ ಏಕೈಕ ಅಶ್ವತ್ಥಾಮ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ಮಾಸ್ಕ್ ಧರಿಸಿ ದೇವಾಲಯಕ್ಕೆ ಬಂದ ಕಳ್ಳ ದೇವರಿಗೆ ನಮಿಸಿ ಬಳಿಕ ದೇವರ ಮೂರ್ತಿಯನ್ನೇ ಕದ್ದೊಯ್ದಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಿಸಿ ಟಿವಿ ಫುಟೇಜ್ ವಶಕ್ಕೆ ಪಡೆದಿದ್ದಾರೆ.