ಹಾಸನ: ಮಗಳ ಸಾವಿನಿಂದ ಮನನೊಂದ ತಂದೆ, ಅಳಿಯನ ಮನೆ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡ ತಂದೆ. ಒಂದು ವರ್ಷದ ಹಿಂದೆ ನಾಗರಾಜ್ ಪುತ್ರಿ ಹೇಮಶ್ರೀಯನ್ನು ವಿವಾಹವಾಗಿದ್ದ ಪ್ರವೀಣ್, ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಗರ್ಭಿಣಿಯಾಗಿದ್ದವಳ ಗರ್ಭಪಾತಕ್ಕೂ ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಮಾವನಿಂದ 2 ಲಕ್ಷ ರೂಪಾಯಿ ಸಾಲ ಪಡೆದವನು ವಾಪಸ್ ನೀಡದೇ ಸತಾಯಿಸುತ್ತಿದ್ದ. ಕೆಲ ದಿನಗಳ ಹಿಂದೆ ಹೇಮಶ್ರೀ ಮೃತಪಟ್ಟಿದ್ದು, ಮಗಳ ಸಾವಿನಿಂದ ನೊಂದ ತಂದೆ ನಾಗರಾಜ್, ಅಳಿಯನ ಮನೆ ಮುಂದೆ ನೇಣಿಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿಟ್ಟು ಅಳಿಯ ಹಾಗೂ ಆತನ ಮನೆಯವರು ಮಗಳಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.