ಮುಂಬೈ: ಫೀಚರ್ ಫೋನ್ ಗಳಿಗಾಗಿ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಯುಪಿಐ ನಡಿ ಹಣ ಕಳುಹಿಸಲು ಇನ್ನುಮುಂದೆ ಇಂಟರ್ನೆಟ್ ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ದ್ವೈಮಾಸಿಕ ಹಣಕಾಸು ನೀತಿ ಸಭೆಯ ನಂತರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಯುಪಿಐ ಹಣಕಾಸು ಪಾವತಿ ಸೇವೆ ಇತ್ತೀಚೆಗೆ ಜನಪ್ರಿಯವಾಗಿದ್ದು, ಇದನ್ನು ಮತ್ತಷ್ಟು ಸರಳಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಇಂಟರ್ನೆಟ್ ಸೌಲಭ್ಯವಿಲ್ಲದ ಫೀಚರ್ ಫೋನ್ ಬಳಕೆದಾರರು ಕೂಡ ಯುಪಿಐ ಬಳಕೆ ಮಾಡುವಂತೆ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ.
ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಪೇ, ಫೋನ್ ಪೇ ಮೊದಲಾದವುಗಳ ಮೂಲಕ ಯುಪಿಐ ಬಳಸುತ್ತಿದ್ದಾರೆ. ಇದಕ್ಕೆ ಇಂಟರ್ನೆಟ್ ಅಗತ್ಯವಾಗಿದ್ದು, ಇಂಟರ್ನೆಟ್ ಇಲ್ಲದ ಫೀಚರ್ ಫೋನ್ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ.