alex Certify ಲೆಹೆಂಗಾ ಬದಲಿಗೆ ಜೀನ್ಸ್‌ ಪ್ಯಾಂಟ್ ಧರಿಸಿದ ವಧು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೆಹೆಂಗಾ ಬದಲಿಗೆ ಜೀನ್ಸ್‌ ಪ್ಯಾಂಟ್ ಧರಿಸಿದ ವಧು: ವಿಡಿಯೋ ವೈರಲ್

ಇತ್ತೀಚೆಗೆ ದೇಶಿ ಮದುವೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆ ಅಂದ್ರೆ ಅಲ್ಲಿ ಹಾಡು, ಮೋಜು-ಮಸ್ತಿ, ನೃತ್ಯ ಇರುವುದು ಸಾಮಾನ್ಯ.

ಹಾಗೆಯೇ ವಧು ಧರಿಸಿರುವ ಉಡುಪು, ಆಕೆ ತೊಟ್ಟಿರುವ ಆಭರಣಗಳು ನೆರೆದಿದ್ದವರನ್ನು ಹೆಚ್ಚು ಆಕರ್ಷಿಸುತ್ತದೆ. ಭಾರತೀಯ ಸಂಸ್ಕೃತಿಯ ಮದುವೆಯಲ್ಲಿ ಸೀರೆ, ಅಥವಾ ಲೆಹೆಂಗಾ ಧರಿಸುವುದು ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬಳು ವಧು ಧರಿಸಿರುವ ವಿಚಿತ್ರ ಉಡುಪು ನೋಡಿದ್ರೆ ಶಾಕ್ ಆಗ್ತೀರಾ..!

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಧು ಭಾರವಾದ ಲೆಹೆಂಗಾ ಧರಿಸುವುದರ ಬದಲು ಬಿಳಿ ಬಣ್ಣದ ರಿಪ್ಡ್ ಜೀನ್ಸ್ ತೊಟ್ಟು, ಮದುವೆ ಸಮಾರಂಭಕ್ಕೆ ಹೊರಟಿದ್ದಾಳೆ. ವಧುವು ಕೆಂಪು ಬಣ್ಣದ ಬ್ಲೌಸ್, ದುಪ್ಪಟ್ಟಾ ಹಾಗೂ ಭಾರೀ ಆಭರಣಗಳನ್ನು ಧರಿಸಿದ್ದಾಳೆ. ಆದರೆ, ಸ್ಕರ್ಟ್ ಬದಲಿಗೆ ಈಕೆ ಬಿಳಿ ಬಣ್ಣದ ರಿಪ್ಡ್ ಜೀನ್ಸ್ ಪ್ಯಾಂಟ್ ತೊಟ್ಟಿದ್ದಾಳೆ.

ವಧುವಿನ ಉಡುಪು ನೋಡಿ ನೆರೆದಿದ್ದವರು ಒಂದುಕ್ಷಣ ಅವಕ್ಕಾಗಿದ್ದಾರೆ. ತಾನು ಲೆಹೆಂಗಾವನ್ನು ಧರಿಸಲು ಬಯಸುವುದಿಲ್ಲ, ಇದೇ ಉಡುಪಿನಲ್ಲಿ ಮದುವೆ ಮಂಟಪಕ್ಕೆ ಹೋಗಲು ಬಯಸುವುದಾಗಿ ಸಂಬಂಧಿಕರಲ್ಲಿ ಹೇಳಿದಾಗ, ಎಲ್ಲರೂ ಗೊಳ್ಳನೆ ನಕ್ಕಿದ್ದಾರೆ.

ವಿಟ್ಟಿ ವೆಡ್ಡಿಂಗ್ ಎಂಬ ಇನ್‌ಸ್ಟಾಗ್ರಾಮ್‌ ಪುಟದಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ವಧುವಿನ ಉಡುಪು ನೋಡಿದ ಬಳಕೆದಾರರು ಟೀಕಿಸಿದ್ದಾರೆ. ವಧು ಸಂಪ್ರದಾಯಗಳನ್ನು ಗೌರವಿಸಬೇಕು, ಒಂದು ವೇಳೆ ಜೀನ್ಸ್ ಪ್ಯಾಂಟ್ ಬೇಕು ಅಂತಿದ್ದರೆ, ಸಾಂಪ್ರದಾಯಿಕ ಬ್ಲೌಸ್, ದುಪ್ಪಟ್ಟಾ ಯಾಕೆ ಧರಿಸಬೇಕಿತ್ತು ಎಂದೆಲ್ಲಾ ಪ್ರಶ್ನಿಸಿದ್ದಾರೆ.

https://www.youtube.com/watch?v=wr84GdmHDkY

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...