ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆರಂಭಕ್ಕೆ ಸಿದ್ಧತೆ ಬರದಿಂದ ಸಾಗಿದ್ದು, ಟ್ವಿನ್ ಎಂಜಿನ್ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಚಿವ ನಾರಾಯಣಗೌಡ ಅವರು ತಿಳಿಸಿದ್ದಾರೆ.
ಡಿಜಿಸಿಎ Flying Training organization approval ನೀಡಿದ ತಕ್ಷಣವೇ ತರಬೇತಿಯನ್ನು ಆರಂಭಿಸಲಾಗುವುದು ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಪುನರಾರಂಭಕ್ಕೆ ಸಚಿವ ನಾರಾಯಣಗೌಡ ಅವಿರತ ಶ್ರಮಿಸುತ್ತಿದ್ದು, ರನ್ ವೇ ಕಾಮಗಾರಿ ಪೂರ್ಣಗೊಂಡಿದ್ದು, ದುರಸ್ತಿಕಾರ್ಯಗಳು ಮುಗಿದಿವೆ. ತರಬೇತಿ ಶಾಲೆ ಆರಂಭಕ್ಕೆ ಮತ್ತೊಂದು ಹೆಜ್ಜೆ ಎಂಬಂತೆ ಇದೀಗ ವಿಮಾನ ಹಾರಾಟ ಪರೀಕ್ಷೆ ಕೂಡ ಯಶಸ್ವಿಯಾಗಿದೆ.
ಡಿಜಿಸಿಎ ಅನುಮೋದನೆ ಪಡೆದು ಜಕ್ಕೂರು ವೈಮಾನಿಕ ತರಬೇತಿ ಶಾಲೆ ಮುಖ್ಯ ಬೋಧಕರಾದ ಕ್ಯಾ.ಕಮಲ್ ಕಿಶೋರ್ ಮತ್ತು ನಾಗಪುರ ಏವಿಯೇಷನ್ ಡೆಪ್ಯುಟಿ ಮುಖ್ಯ ಬೋಧಕರಾದ ಕ್ಯಾ. ಎಜಿಲರಸನ್ ಅವರು ಟ್ವಿನ್ ಎಂಜಿನ್ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಸಿದರು.
ಯುವತಿಯಿಂದಲೇ ಗುಂಡಿ ತೋಡಿಸಿ, ಶೂಟ್ ಮಾಡಿ ಅದರಲ್ಲಿಯೇ ಮುಚ್ಚಿದ ದುಷ್ಕರ್ಮಿಗಳು….!
ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಡಿಜಿಸಿಎ ನಿಯಮಾವಳಿ ಪ್ರಕಾರ ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆಯಲು 200 ಗಂಟೆಗಳ ಹಾರಾಟ ತರಬೇತಿ ಪೂರ್ಣಗೊಳಿಸಿರಬೇಕು. ಇದರಲ್ಲಿ 185 ತಾಸು ಸಿಂಗಲ್ ಎಂಜಿನ್ ಹಾಗೂ 15 ತಾಸು ಟ್ವಿನ್ ಎಂಜಿನ್ ಮಿಮಾನದಲ್ಲಿ ತರಬೇತಿ ನೀಡಲಾಗುತ್ತದೆ. ಈ ಹಿಂದೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಟ್ವಿನ್ ಎಂಜಿನ್ ವಿಮಾನ ಇಲ್ಲದ ಕಾರಣಕ್ಕೆ 185 ತಾಸುಗಳ ಸಿಂಗಲ್ ಎಂಜಿನ್ ತರಬೇತಿ ನೀಡಿ, ಉಳಿದ 15 ತಾಸಿನ ಟ್ವಿನ್ ಎಂಜಿನ್ ವಿಮಾನ ಹಾರಾಟ ತರಬೇತಿಗೆ ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು.
ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆಗೆ 5 ಕೋಟಿ ವೆಚ್ಚದಲ್ಲಿ ಟ್ವಿನ್ ಎಂಜಿನ್ ವಿಮಾನ ಖರೀದಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು 185 ತಾಸು ಸಿಂಗಲ್ ಎಂಜಿನ್ ಮತ್ತು 15 ತಾಸು ಟ್ವಿನ್ ಎಂಜಿನ್ ಹಾರಾಟ ತರಬೇತಿಯನ್ನು ಹೆಚ್ಚಿನ ಹೊರೆಯಾಗದೇ ಇಲ್ಲೇ ಪಡೆಯಲು ಅನುಕೂಲವಾಗಲಿದೆ.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ 5 ಸಿಂಗಲ್ ಎಂಜಿನ್ ವಿಮಾನಗಳಿದ್ದು, ಹೊಸದಾಗಿ ಒಂದು ಟ್ವಿನ್ ಎಂಜಿನ್ ವಿಮಾನ ಖರೀದಿಸಿ ತರಬೇತಿಗೆ ಒದಗಿಸಲಾಗಿದೆ.