alex Certify BIG BREAKING: RBI ಮಹತ್ವದ ನಿರ್ಧಾರ, ಬದಲಾಗದ ರೆಪೊ ದರ, ಪಾಲಿಸಿ ರೆಪೊ ದರ ಶೇ. 4 ರಷ್ಟು ನಿಗದಿಗೆ ಸರ್ವಾನುಮತದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: RBI ಮಹತ್ವದ ನಿರ್ಧಾರ, ಬದಲಾಗದ ರೆಪೊ ದರ, ಪಾಲಿಸಿ ರೆಪೊ ದರ ಶೇ. 4 ರಷ್ಟು ನಿಗದಿಗೆ ಸರ್ವಾನುಮತದ ತೀರ್ಮಾನ

ಮುಂಬೈ: ವಿತ್ತೀಯ ನೀತಿ ಸಮಿತಿಯು(MPC) ಪಾಲಿಸಿ ರೆಪೊ ದರವನ್ನು ಶೇ. 4 ರಷ್ಟು ಇರಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ.

MSF ದರ ಮತ್ತು ಬ್ಯಾಂಕ್ ದರವು ಶೇ. 4.25 ರಲ್ಲಿ ಬದಲಾಗದೆ ಉಳಿಯುತ್ತದೆ. ರಿವರ್ಸ್ ರೆಪೋ ದರವು ಶೇ. 3.35 ರಷ್ಟರಲ್ಲಿ ಬದಲಾಗದೆ ಉಳಿದಿದೆ ಎಂದು MPC ಸಭೆಯ ನಂತರ RBI ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ, ರಾಜ್ಯಗಳಲ್ಲಿ ವ್ಯಾಟ್‌ ಗಮನಾರ್ಹವಾದ ಕಡಿತವು ಖರೀದಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬಳಕೆಯ ಬೇಡಿಕೆಯನ್ನು ಬೆಂಬಲಿಸಬೇಕು. ಆಗಸ್ಟ್‌ ನಿಂದ ಸರ್ಕಾರದ ಬಳಕೆ ಕೂಡ ಹೆಚ್ಚುತ್ತಿದೆ, ಒಟ್ಟಾರೆ ಬೇಡಿಕೆಗೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ನೈಜ GDP ಬೆಳವಣಿಗೆಯನ್ನು 2021-22 ರಲ್ಲಿ ಶೇ. 9.5 ರಲ್ಲಿ ಉಳಿಸಿಕೊಳ್ಳಲಾಗಿದೆ, Q3 ನಲ್ಲಿ ಶೇ. 6.6 ಮತ್ತು Q4 ನಲ್ಲಿ ಶೇ. 6 ರಷ್ಟು ಒಳಗೊಂಡಿದೆ. 2022-23 ರ Q1 ಕ್ಕೆ ಶೇ. 17.2 ಮತ್ತು 2022-23 ರ Q2 ಗೆ ಶೇ. 7.8 ನಲ್ಲಿ ನೈಜ GDP ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...