alex Certify ಹಿರಿಯ ಮಹಿಳೆಗೆ ಸೀಟು ನೀಡದ್ದಕ್ಕೆ ನಿಂದನೆಗೊಳಗಾದ ಗರ್ಭಿಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಮಹಿಳೆಗೆ ಸೀಟು ನೀಡದ್ದಕ್ಕೆ ನಿಂದನೆಗೊಳಗಾದ ಗರ್ಭಿಣಿ

ಬಸ್ಸಿನಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬರಿಗೆ ಎದ್ದು ನಿಂತು ಸೀಟು ಬಿಡದೇ ಇದ್ದ ಕಾರಣಕ್ಕೆ ಗರ್ಭಿಣಿ ಮಹಿಳೆಯೊಬ್ಬರನ್ನು ’ಸೋಂಬೇರಿ’ ಎಂದು ಜರಿದ ಸಹ ಪ್ರಯಾಣಿಕರು ಆಕೆಯನ್ನು ಹೀಯಾಳಿಸಿ ನೋಡಿದ ಘಟನೆಯೊಂದು ವೈರಲ್‌ ಆಗಿದೆ.

ಈ ಬಗ್ಗೆ ರೆಡ್ಡಿಟ್‌ನಲ್ಲಿ ಕಥೆ ಶೇರ್‌ ಮಾಡಿಕೊಂಡ 26 ವರ್ಷ ವಯಸ್ಸಿನ ಮಹಿಳೆ, ತಾನು 8-ಗಂಟೆಗಳ ಕಾಲ ಕೆಲಸ ಮಾಡಿ ಮುಗಿದ ಬಳಿಕ ಮನೆಗೆ ತೆರಳಲು ಬಸ್‌ ಏರಿದ್ದು, 2 ಗಂಟೆಗಳ ಕಾಲ ಪ್ರಯಾಣಿಸಬೇಕಿದ್ದಾಗಿ ತಿಳಿಸಿದ್ದಾರೆ.

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

“ನಾನು ಬಸ್‌ ಒಳಗೆ ಬಂದಾಗ ಬಾಟಮ್ ಡೆಕ್‌ನಲ್ಲಿ ಸ್ವಲ್ಪ ಬ್ಯುಸಿ ಇದ್ದು, ಒಂದು ಡಬಲ್ ಸೀಟ್ ಮಾತ್ರವೇ ಖಾಲಿ ಇತ್ತು. ಸಾಮಾನ್ಯವಾಗಿ ನಾನು ಮೇಲಿನ ಹಂತಕ್ಕೆ ಹೋಗುತ್ತೇನೆ. ಆದರೆ ಈ ಬಾರಿ ಎಷ್ಟು ಬ್ಯುಸಿ ಇತ್ತೆಂದರೆ, ನನ್ನ ಜೊತೆಗೆ 4-5 ಭಾರೀ ಬ್ಯಾಗುಗಳಿದ್ದು, ಮೆಟ್ಟಿಲುಗಳನ್ನು ಏರಲು ಸುರಕ್ಷಿತ ಎಂದು ನನಗೆ ಅನಿಸದೇ ಇದ್ದ ಕಾರಣ, ಅದರಲ್ಲೂ ನನಗೆ 18 ವಾರಗಳು ತುಂಬಿದ್ದರಿಂದ, ನಾನು ಕೆಳಗೇ ಕುಳಿತುಕೊಂಡೆ,” ಎಂದು ಈಕೆ ಬರೆದಿದ್ದಾರೆ.

“ಆಕೆ ಸೀಟು ಕೇಳುವಾಗ ಗಂಭೀರವಾಗಿಯೂ ಮಾತನಾಡಲಿಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆಕೆಗೆ ನನ್ನ ಪಕ್ಕ ಕೂರಬೇಕೆಂದು ಇತ್ತು. ಹಾಗಾಗಿ ನಾನು ನನ್ನ ಬ್ಯಾಗುಗಳನ್ನು ತಳ್ಳಿ ಪಕ್ಕ ಸರಿಯಲು ಮುಂದಾದೆ, ಆಗ ಆಕೆ ನನಗೆ ಮತ್ತೊಂದು ಸೀಟನ್ನು ಹಿಡಿಯಲು ತಿಳಿಸಿ, ಇದು ದಿವ್ಯಾಂಗಿಗಳಿಗೆ ಮೀಸಲಾದ ಸೀಟು ಎಂದರು. ನೀನು ಸ್ಪಷ್ಟವಾಗಿ ದಿವ್ಯಾಂಗಿ ಅಲ್ಲ, ಮೇಲೆ ಸಾಕಷ್ಟು ಸೀಟುಗಳಿವೆ ಎಂದರು,” ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಝೂಮ್ ಕರೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ 900 ಉದ್ಯೋಗಿಗಳು

ದಿವ್ಯಾಂಗಿಗಳಿಗೆ ಮೀಸಲಾದ ಸೀಟುಗಳು ಬೇರೆಡೆ ಇವೆ ಎಂದು ತಿಳಿಸಿದರೂ ಸಹ ಅರ್ಥ ಮಾಡಿಕೊಳ್ಳದ ಹಿರಿಯ ಮಹಿಳೆ, ತನಗೆ ಒಂದು ಸೀಟಿನಲ್ಲಿ ತಾನೊಬ್ಬಳೇ ಕೂರಬೇಕೆಂದು ಹಠ ಹಿಡಿದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪುರುಷರೊಬ್ಬರು ತಮ್ಮ ಸೀಟನ್ನು ಹಿರಿಯ ಮಹಿಳೆಗೆ ಬಿಟ್ಟುಕೊಟ್ಟು ಮೇಲಿನ ಹಂತಕ್ಕ ಹೋಗಿದ್ದಾರೆ. ಆದರೆ ಈ ವೇಳೆ ಗರ್ಭಿಣಿ ಮಹಿಳೆಗೆ ’ಡರ್ಟಿ ಲುಕ್’ ಒಂದನ್ನು ಕೊಟ್ಟು ಹೋಗಿದ್ದಾರೆ.

“ಮುಂದಿನ 10-15 ನಿಮಿಷಗಳ ಕಾಲ ಬಸ್ಸಿನಲ್ಲಿದ್ದ ಇತರ ಹಿರಿಯ ಹೆಂಗಸರೊಂದಿಗೆ ಮಾತನಾಡಿದ ಈಕೆ, ಇಂದಿನ ಮಕ್ಕಳಿಗೆ ದೊಡ್ಡವರೆಂದರೆ ಅಥವಾ ದಿವ್ಯಾಂಗಿಗಳೆಂದರೆ ಸ್ವಲ್ಪವೂ ಮರ್ಯಾದೆಯೇ ಇಲ್ಲ ಎಂದಿದ್ದಲ್ಲದೇ ತಾವು ತಮ್ಮ ದಿನಗಳಲ್ಲಿ ದೊಡ್ಡವರನ್ನು ಹೇಗೆ ಕಾಣುತ್ತಿದ್ದರು ಎಂದು ಹೇಳುತ್ತಿದ್ದರು,” ಎಂದು ಗರ್ಭಿಣಿ ಮಹಿಳೆ ತಮ್ಮ ಸ್ಟೋರಿಯಲ್ಲಿ ಮುಂದುವರೆದಿದ್ದಾರೆ.

ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ವಿಕ್ರಾಂತ್ ರೋಣ ಬಿಡುಗಡೆಗೆ ಡೇಟ್ ಫಿಕ್ಸ್….!

ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ದಿವ್ಯಾಂಗಿಗಳ ಸೀಟುಗಳು ಎಲ್ಲಿವೆ ಎಂದು ನೀವು ತೋರಬೇಕಿತ್ತು,” ಎಂದರೆ, ಮತ್ತೊಬ್ಬರು, “ನೀವು 18 ವಾರಗಳ ಗರ್ಭವತಿ ಹಾಗೂ ನಿಮ್ಮನ್ನು ಹಾಗೂ ನಿಮ್ಮ ಮಗುವನ್ನು ಸೇಫಾಗಿಡಲು ನೀವು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೀರಿ. ಹಿರಿಯರು ಎಂಬ ಮಾತ್ರಕ್ಕೆ ಎಲ್ಲವೂ ಅವರದ್ದೇ ಎನ್ನಲಾಗದು,” ಎಂದಿದ್ದು, ಆಕೆಯ ಬೆಂಬಲಕ್ಕೆ ಬಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...