ಮನೆಯಲ್ಲೇ ಕುಳಿತು ಆದಾಯ ಗಳಿಸುವ ವಿಧವೊಂದನ್ನು ಹುಡುಕುವ ಮಂದಿಗೆ ಅಪರೂಪದ ನಾಣ್ಯಗಳ ಸಂಗ್ರಹವೂ ದುಡ್ಡು ಮಾಡುವ ಒಳ್ಳೆಯ ಮೂಲ. ಯಾವುದೇ ಪರಿಶ್ರಮ ಇಲ್ಲದೇ ತ್ವರಿತವಾಗಿ ದುಡ್ಡು ಮಾಡಲು ಇದೊಂದು ಒಳ್ಳೆಯ ಮಾರ್ಗ.
ಮನೆಯಲ್ಲೇ ಕುಳಿತು ಏಳು ಲಕ್ಷ ರೂ.ಗಳಿಗಿಂತ ಹೆಚ್ಚು ಸಂಪಾದಿಸಬಲ್ಲ ಆಯ್ಕೆಯೊಂದರ ಕುರಿತು ನಿಮಗೆ ನಾವು ತಿಳಿಸುತ್ತಿದ್ದೇವೆ.
ನಿಮ್ಮ ಬಳಿ 1 ರೂಪಾಯಿ ಮುಖಬೆಲೆಯ ಈ ನೋಟಿದ್ದರೆ, ಆನ್ಲೈನ್ ಮೂಲಕ ಅದನ್ನು ಮಾರಿ ಏಳು ಲಕ್ಷ ರೂಪಾಯಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ನೋಟನ್ನು 26 ವರ್ಷಗಳ ಹಿಂದೆ ಟಂಕಿಸುವುದನ್ನು ನಿಲ್ಲಿಸಲಾಗಿದೆ. ಆದರೆ ಜನವರಿ 2015ರಲ್ಲಿ ಇದೇ ನೋಟನ್ನು ಹೊಸ ಬ್ರಾಂಡ್ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.
ಕಣ್ಣೆದುರೇ ನೆಲಕ್ಕುರುಳಿದ ಕೇಕ್ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ
ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಸ್ವಾತಂತ್ರ್ಯ ಪೂರ್ವದ ಕಾಲದ್ದು. ಆರ್ಬಿಐನ ಅಂದಿನ ಗರ್ವನರ್ ಜೆಡಬ್ಲ್ಯೂ ಕೆಲ್ಲಿ ಅವರ ಸಹಿ ಇರುವ ಈ ನೋಟು 80 ವರ್ಷದಷ್ಟು ಹಳೆಯದ್ದಾಗಿದೆ. ಬ್ರಿಟಿಷ್ ಆಡಳಿತವು ಇದನ್ನು 1935ರಲ್ಲಿ ಮುದ್ರಿಸಿತ್ತು. ಈ ವಿಶಿಷ್ಟ ನೋಟುಗಳಲ್ಲಿ ಯಾವಾದರೂ ನಿಮ್ಮೊಂದಿಗೆ ಇದ್ದರೆ ಅವುಗಳನ್ನು ಓಎಲ್ಎಕ್ಸ್ನಲ್ಲಿ ಮಾರಬಹುದಾಗಿದೆ.