ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ(ಪಿ.ಎಲ್.ಐ.) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ(ಆರ್.ಪಿ.ಎಲ್.ಐ.) ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ(ಅಂಚೆ ಜೀವ ವಿಮೆ ಏಜೆಂಟರ್) ನಿಯುಕ್ತಿಗಾಗಿ ಇದೇ ಡಿಸೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ವಿದ್ಯಾರ್ಹತೆ ಕನಿಷ್ಠ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಾಸಸ್ಥಳ ಪ್ರಮಾಣ ಪತ್ರ ಹೊಂದಿರಬೇಕು. ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಘಗಳ ನೇರ ಪ್ರತಿನಿಧಿಯಾಗಿರಬಾರದು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಯಾವುದೇ ವೇತನ ಅಥವಾ ಭತ್ಯೆ ಇರುವುದಿಲ್ಲ. ಜೀವ ವಿಮೆಗಳ ವ್ಯವಹಾರವನ್ನಾಧರಿಸಿ ಸೂಕ್ತ ಕಮಿಷನ್ ನೀಡಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕದ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ಜಿರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 5000 ರೂ.ಗಳ ಎನ್.ಎಸ್.ಸಿ. ಅಥವಾ ಕೆವಿಪಿ ಖರೀದಿಸಿ ವರಿಷ್ಠ ಅಂಚೆ ಅಧೀಕ್ಷಕರು, ಕಲಬುರಗಿ ವಿಭಾಗ ಇವರ ಹೆಸರಿನಲ್ಲಿ ಪ್ಲೇಡ್ಜ್ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಚೆ ಕಚೇರಿಯನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-263800 ಹಾಗೂ ಮೊಬೈಲ್ ಸಂಖ್ಯೆ 9886248554 ಗೆ ಸಂಪರ್ಕಿಸಲು ಕೋರಲಾಗಿದೆ.