alex Certify ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೆದುರೇ ನೆಲಕ್ಕುರುಳಿದ ಕೇಕ್‌ ಕಂಡು ಅವಕ್ಕಾದ ವಧು – ವರ…! ಮರುಕ್ಷಣದಲ್ಲೇ ಮೊಗದಲ್ಲಿ ಮೂಡಿದ ಮಂದಹಾಸ

Bride and groom shocked as hotel staff drops wedding cake by mistake in viral  video. Wait for the big twist - Trending News Newsಕ್ರಿಶ್ಚಿಯನ್ ಶೈಲಿಯ ಮದುವೆ ಅಂದ್ರೆ ಅಲ್ಲಿ ಕೇಕ್ ಇರಲೇಬೇಕು. ಕೇಕ್ ಇಲ್ಲ ಅಂದ್ರೆ ಮದುವೆಯೇ ಅಪೂರ್ಣ. ಒಂದು ವೇಳೆ ಮದುವೆಗೆ ಅಂತಾ ತಂದಿರೋ ಕೇಕ್ ವರ-ವಧುವಿನ ಕಣ್ಮುಂದೆಯೇ ಬಿದ್ದು ಬಿಟ್ರೆ ಏನಾಗಬಹುದು ಹೇಳಿ..!?

ಹೌದು, ಇಂಥದ್ದೇ ಘಟನೆ ಮದುವೆಯೊಂದರಲ್ಲಿ ನಡೆದಿದೆ. ವರ‌ – ವಧು ತಮ್ಮ ವಿವಾಹದ ಸಂಭ್ರಮದಲ್ಲಿದ್ದರು. ಈ ವೇಳೆ ಅವರಿಗಾಗಿ ತಂದ ಕೇಕ್ ಆಕಸ್ಮಿಕವಾಗಿ ಬಿದ್ದುಬಿಟ್ಟಿದೆ. ಇದರಿಂದ ಒಂದು ಕ್ಷಣ ಈ ಜೋಡಿ ಅವಕ್ಕಾಗಿದ್ದಾರೆ. ಇನ್ನೇನು ಕಣ್ಣಲ್ಲಿ ಗಳಗಳನೇ ನೀರು ಬಂತು ಅನ್ನೋವಷ್ಟರಲ್ಲಿ ಇಬ್ಬರ ಮುಖದಲ್ಲೂ ಮಂದಹಾಸ ಮೂಡಿದೆ.

ಯಾಕೆಂದರೆ, ಇದು ವಧು – ವರನಿಗೆ ಮಾಡಿರುವ ಪ್ರಾಂಕ್ ಆಗಿತ್ತು. ಇದು ಅವರಿಗಾಗಿ ತಂದ ಕೇಕ್ ಆಗಿರಲಿಲ್ಲ. ಬಳಿಕ ಇನ್ನೊಂದು ಬದಿಯಿಂದ ವಧು – ವರನಿಗೆಂದು ತಯಾರಿಸಿದ್ದ ವಿಶೇಷ ಕೇಕ್ ಅನ್ನು ತರುತ್ತಿದ್ದಂತೆ ಜೋಡಿಗಳು ಖುಷಿಪಟ್ಟಿದ್ದಾರೆ. ನಂತರ ಕೇಕ್ ಕತ್ತರಿಸಿ, ದಂಪತಿ ನೃತ್ಯ ಮಾಡಿದ್ದಾರೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು 2 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

https://www.youtube.com/watch?v=oXMClWMYFdQ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...