alex Certify ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಹಾವುಗಳ ಹಾವಳಿಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ 8 ಮಿಲಿಯನ್ ಡಾಲರ್ ವೆಚ್ಚದ ಮನೆಯನ್ನು ಸುಟ್ಟು ಬೂದಿ ಮಾಡಿರುವ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ.

ಅಮೆರಿಕಾದ ವಾಷಿಂಗ್ಟನ್ ನ ಹೊರಗೆ ಸುಮಾರು 25 ಮೈಲುಗಳಷ್ಟು (ಸುಮಾರು 40 ಕಿಲೋಮೀಟರ್) ದೂರದ ಪಟ್ಟಣವಾದ ಪೂಲ್ಸ್ವಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸರ್ಪಗಳ ಹಾವಳಿಯಿಂದ ರೋಸಿ ಹೋದ ಮನೆ ಮಾಲೀಕ, ಅದನ್ನು ಹೇಗಾದರೂ ಓಡಿಸಬೇಕು ಅಂತಾ ಮಾಡಿರೋ ಪ್ಲಾನ್ ಉಲ್ಟಾ ಹೊಡೆದಿದೆ.

ಹೊಗೆ ಹಾಕಿದ್ರೆ ತನ್ನ ಬಂಗ್ಲೆಯಿಂದ ಹಾವುಗಳು ಓಡಿಹೋಗಬಹುದು ಅಂತಾ ಈ ನಿರ್ಧಾರ ಮಾಡಿದ್ದಾನೆ. ಹೀಗಾಗಿ ತನ್ನ ಬಂಗ್ಲೆಗೆ ಬೆಂಕಿಯಿಟ್ಟಿದ್ದಾನೆ. ಅಗ್ನಿ ಧಗಧಗನೇ ಹೊತ್ತಿ ಉರಿದಿದ್ದು, ಇಡೀ ಬಂಗ್ಲೆಯನ್ನೇ ಆವರಿಸಿ ಸುಟ್ಟು ಹೋಗಿದೆ.

ನವೆಂಬರ್ 23 ರಂದು ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಾಳಿಗೆಯಲ್ಲಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದ್ದು, 75 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಹಾವುಗಳ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

— Pete Piringer (@mcfrsPIO) December 3, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...