ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್ನ ಕಾಲೇಜು ವಿದ್ಯಾರ್ಥಿ ತನ್ನದೇ ಆದ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ.
ಈ ಕಾರ್, ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 185 ಕಿಮೀ ಓಡುತ್ತದೆಯಂತೆ. ಸಾಗರದ ಹಿಮಾಂಶು ಭಾಯ್ ಪಟೇಲ್ 5 ತಿಂಗಳಲ್ಲಿ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಎಲೆಕ್ಟ್ರಿಕ್ ಕಾರಿನಲ್ಲಿ ಚಾಲಕ ಸೇರಿದಂತೆ 5 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. ಈ ಕಾರು ಸಂಪೂರ್ಣ ಚಾರ್ಜ್ ಮಾಡಿದರೆ 185 ಕಿ.ಮೀ ಓಡತ್ತದೆ. ಕಾರು ಗಂಟೆಗೆ 50 ಕಿಮೀ ವೇಗದಲ್ಲಿ ಚಲಿಸುತ್ತದೆ.
ಇನ್ನೊಂದು ವಿಶೇಷವೆಂದ್ರೆ ಕಾರ್ ಪೂರ್ಣ ಚಾರ್ಜ್ಗೆ ಕೇವಲ 30 ರೂಪಾಯಿ ಖರ್ಚು ಬರುತ್ತದೆ. ಕಾರು ಕೇವಲ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ರಿಮೋಟ್ ಕಂಟ್ರೋಲರ್ ಆಧಾರಿತ ಸ್ಟಾರ್ಟ್/ಸ್ಟಾಪ್ ಫಂಕ್ಷನ್ನೊಂದಿಗೆ ಬರುತ್ತದೆ. ಕಾರು ರಿವರ್ಸ್ ಮೋಡ್ ಒಳಗೊಂಡಿದೆ. ಕಾರಿನ ಇತರ ವೈಶಿಷ್ಟ್ಯಗಳೆಂದರೆ ಎಲೆಕ್ಟ್ರಾನಿಕ್ ಸ್ಪೀಡ್ ಮೀಟರ್, ಬ್ಯಾಟರಿ ಪವರ್ ಮೀಟರ್, ಫಾಸ್ಟ್ ಚಾರ್ಜರ್, ಎಲೆಕ್ಟ್ರಿಕಲ್ ಸುರಕ್ಷತೆಗಾಗಿ ಫ್ಯೂಸ್ ಸಿಸ್ಟಮ್ ಮತ್ತು ಆಂಟಿ-ಥೆಫ್ಟ್ ಅಲಾರ್ಮ್.
ಮಹೀಂದ್ರ ಥಾರ್ನಂತೆಯೇ ಈ ಕಾರು ಎಸ್ಯುವಿ ರೀತಿ ಕಾಣುತ್ತದೆ. ಈ ಕಾರಿನ ನಿರ್ಮಾಣಕ್ಕೆ ಕೇವಲ 2 ಲಕ್ಷ ರೂಪಾಯಿ ಖರ್ಚು ಬಂದಿದೆ.