ಬೆಂಗಳೂರು: ಒಮಿಕ್ರಾನ್ ಸೋಂಕಿತ ವೈದ್ಯನಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಇಬ್ಬರು ಒಮಿಕ್ರಾನ್ ಸೋಂಕಿತರಲ್ಲಿ ಓರ್ವ ವೈದ್ಯರಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಸೋಂಕಿತ ವೈದ್ಯ ಗುಣಮುಖರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಡಿಸ್ಚಾರ್ಜ್ ಗೆ ಸಿದ್ದತೆ ನಡೆಸಲಾಗಿತ್ತು. ಆದರೆ ನಿನ್ನೆ ಮತ್ತೊಮ್ಮೆ ವೈದ್ಯರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಇದೀಗ ಪಾಸಿಟಿವ್ ಬಂದಿದೆ.
ಶಾಲೆಯಲ್ಲೇ ನಡೆದಿದೆ ನಡೆಯಬಾರದ ಘಟನೆ: ರಾತ್ರಿ ಪ್ರಾಕ್ಟಿಕಲ್ ಎಕ್ಸಾಂ ನೆಪದಲ್ಲಿ ಕಿರುಕುಳ, ಮರುದಿನ ಮನೆಗೆ ಮರಳಿದ ಹುಡುಗಿಯರು
ಒಮಿಕ್ರಾನ್ ಸೋಂಕಿತ ವೈದ್ಯರಿಗೆ ನಿನ್ನೆ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಟೆಸ್ಟ್ ವರದಿ ಇಂದು ಬಂದಿದ್ದು, ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ವೈದ್ಯನಿಗೆ ಚಿಕಿತ್ಸೆ ಮುಂದುವರೆದಿದೆ.