ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ, ಅಡುಗೆ ಎಣ್ಣೆ, ಧಾನ್ಯ, ಬೇಳೆಕಾಳುಗಳ ಬೆಲೆ ಗಗನಕ್ಕೇರಿದೆ. ಈಗ ಚಿಕನ್ ಬೆಲೆ ಕೂಡ ಮತ್ತಷ್ಟು ದುಬಾರಿಯಾಗಲಿದೆ.
ಒಂದು ಕೆಜಿ ಕೋಳಿ ಮಾಂಸದ ಉತ್ಪಾದನೆ ವೆಚ್ಚ 70 ರಿಂದ 100 ರೂಪಾಯಿಗೆ ಏರಿಕೆಯಾಗಿದೆ. ಸೋಯಾ ದರ ದುಬಾರಿಯಾಗಿದೆ. ಮೆಕ್ಕೆಜೋಳ ದರ ಕೂಡ ಹೆಚ್ಚಳ ಕಂಡಿದೆ. ಇದರಿಂದಾಗಿ ಕುಕ್ಕುಟೋದ್ಯಮದಲ್ಲಿ ದರ ಹೆಚ್ಚಳವಾಗತೊಡಗಿದ್ದು, ಕೋಳಿ ಮಾಂಸದ ದರ ಮತ್ತಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಬ್ರಾಯ್ಲರ್ ಕೋಳಿ ಮಾಂಸ ಕೆಜಿಗೆ 200 ರೂಪಾಯಿವರೆಗೂ ಏರಿಕೆ ಕಂಡಿದೆ. ಉತ್ಪಾದನಾ ವೆಚ್ಚ ಹೆಚ್ಚಳ, ಕಚ್ಚಾ ಸಾಮಗ್ರಿಗಳ ಕೊರತೆ ಮೊದಲಾದ ಕಾರಣದಿಂದ ಕೋಳಿ ಮಾಂಸದ ದರ ಮಹಾನಗರಗಳಲ್ಲಿ ಕೆಜಿಗೆ 140 ರೂ., 150 ರೂ., 180 ರೂ., 200 ರೂವರೆಗೆ ಏರಿಕೆ ಕಂಡಿದ್ದು, ಮತ್ತಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗಿದೆ.