ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 21 ಮುಟ್ಟಿದ್ದು, ಜನವರಿ, ಫೆಬ್ರವರಿ ವೇಳೆಗೆ ಭಾರೀ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಲಿವೆ ಎಂದು ತೆಲಂಗಾಣದ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಈ ವೈರಾಣುವಿನ ಕಾಟದಿಂದ ಆಸ್ಪತ್ರೆ ಸೇರುವ ಹಾಗೂ ಮೃತಪಡುವ ಸಾಧ್ಯತೆ ಕಡಿಮೆ ಇದೆ, ಆದರೆ ನಾವು ಎಚ್ಚರಿಕೆಯಿಂದ ಇರಬೇಕು,” ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊತ್ತಂಬರಿ ಸೊಪ್ಪು – ಲಿಂಬೆಹಣ್ಣಿನಿಂದ ಮಾಡಿ ರುಚಿಕರವಾದ ಆರೋಗ್ಯಕರ ʼಸೂಪ್ʼ
ಸಾರ್ವಜನಿಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರಾವ್ ಈ ಬಗ್ಗೆ ಮಾತನಾಡಿ,” ದಕ್ಷಿಣ ಆಫ್ರಿಕಾದಲ್ಲಿ ನಾವು ಕಂಡಂತೆ, ಒಮಿಕ್ರಾನ್ ಅವತಾರಿಯು ನಾಲ್ಕು ಪಟ್ಟು ತೀವ್ರತೆಯಲ್ಲಿ ಹೆಚ್ಚುತ್ತಿದ್ದು, ಒಂದು ವಾರದಿಂದ 10 ದಿನಗಳ ಅವಧಿಯಲ್ಲಿ 16 ಪಟ್ಟು ತೀವ್ರತೆಗೆ ಏರಿದೆ. ಅಸ್ಪತ್ರೀಕರಣ ಹಾಗೂ ಸಾವಿನ ಪ್ರಮಾಣವು ಈ ಅವತಾರಿಯಿಂದ ಕಡಿಮೆ ಇದ್ದರೂ ಸಹ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಈ ಅವತಾರಿಯು 10 ದೇಶಗಳಿಂದ 35 ದೇಶಗಳಿಗೆ ಹಬ್ಬಿದ್ದು, 450-500 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಂದಿನ ಕೆಲ ದಿನಗಳನ್ನು ನಾವು ಗಮನಿಸಿ ನೋಡಬೇಕಿದೆ,” ಎಂದಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ಅನೇಕ ಹಬ್ಬಗಳು ಇರುವ ಕಾರಣ, ಈ ಅವಧಿಯಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಕೋವಿಡ್‌ನಿಂದ ರಕ್ಷಣೆ ಪಡೆಯಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರಿಗೆ ಆಡಳಿತಗಳು ಸೂಚಿಸಿವೆ.