ದೇಶದಲ್ಲಿರುವ 44 ಕೋಟಿಯಷ್ಟು ಜನ್ಧನ್ ಖಾತಾದಾರರ ಪೈಕಿ 55%ಗಿಂತ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂದು ವಿತ್ತ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ನವೆಂಬರ್ 17, 2021ರಂತೆ, ಪ್ರಧಾನ ಮಂತ್ರಿ ಜನ್ಧನ್ ಯೋಜನೆಯಲ್ಲಿ 43.9 ಕೋಟಿ ಫಲಾನುಭವಿಗಳಿದ್ದು, ಇವರಲ್ಲಿ 24.42 ಕೋಟಿ ಮಹಿಳೆಯರಿದ್ದು, ಜನ್ಧನ್ನ ಒಟ್ಟಾರೆ ಖಾತೆಗಳ 55.60%ರಷ್ಟಿದ್ದಾರೆ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಭಗ್ವತ್ ಕರಡ್ ತಿಳಿಸಿದ್ದಾರೆ.
ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!
ಆರ್ಥಿಕ ಒಳಗೊಳ್ಳುವಿಕೆಯ ರಾಷ್ಟ್ರೀಯ ಅಭಿಯಾನದಡಿ ಆಗಸ್ಟ್ 15, 2014ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗೆ ಚಾಲನೆ ಕೊಟ್ಟಿದ್ದು, ತನ್ಮೂಲಕ ಬ್ಯಾಂಕಿಂಗ್ ವ್ಯಾಪ್ತಿಯನ್ನು ದೇಶದ ಎಲ್ಲಾ ವರ್ಗದ ಜನರಿಗೂ ತಲುಪಿಸಲು ಉದ್ದೇಶಿಸಿದೆ. ದೇಶದ ಪ್ರತಿಯೊಂದು ಮನೆಗೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಹೊಂದುವಂತೆ ಮಾಡುವುದು ಈ ಅಭಿಯಾನದ ಗುರಿಯಾಗಿದೆ.
ದೇಶದ ಪ್ರತಿಯೊಬ್ಬ ವಯಸ್ಕನಿಗೂ ಬ್ಯಾಂಕ್ ಖಾತೆ ಇರುವಂತೆ ಮಾಡುವ ಉದ್ದೇಶದಿಂದ ಮೇಲ್ಕಂಡ ಯೋಜನೆಯನ್ನು ಆಗಸ್ಟ್ 14, 2018ರಿಂದ ಆಚೆಗೂ ವಿಸ್ತರಿಸಲಾಗಿದೆ.
ಶಾಲೆ-ಕಾಲೇಜುಗಳಲ್ಲಿ ಕೊರೋನಾ ಅಬ್ಬರ: 13 ದಿನದಲ್ಲಿ 543 ಮಂದಿಗೆ ಸೋಂಕು
ಸುಕನ್ಯಾ ಸಮೃದ್ಧಿ ಯೋಜನೆ ಕುರಿತಂತೆ ಕೇಳಲಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವಾಲಯದ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ, “ಏಪ್ರಿಲ್ 1, 2018ರಿಂದ ಅಕ್ಟೋಬರ್ 31, 2021ರವರೆಗೆ ಸುಕನ್ಯ ಸಮೃದ್ಧಿಯ 1,42,73,910 ಖಾತೆಗಳನ್ನು ತೆರೆಯಲಾಗಿದೆ,” ಎಂದು ತಿಳಿಸಿದ್ದಾರೆ.
ಹೆಣ್ಣು ಮಗು ಹುಟ್ಟಿದಾಗಿನಿಂದ ಅದಕ್ಕೆ 10 ವರ್ಷ ತುಂಬುವವರೆಗೆ ಯಾವುದೇ ಘಳಿಗೆಯಲ್ಲಿ, ಈ ಯೋಜನೆಯಡಿ ಖಾತೆ ತೆರೆದು ಕನಿಷ್ಠ 250 ರೂ.ನಿಂದ ಗರಿಷ್ಠ 1.5 ಲಕ್ಷ ರೂ.ವರೆಗೂ ಠೇವಣಿ ಇಡಬಹುದಾಗಿದೆ. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರವೇ ತೆರೆಯಬಹುದಾಗಿದ್ದು, ಖಾತೆ ತೆರೆದ ದಿನದಿಂದ 21 ವರ್ಷಗಳ ಅವಧಿಯ ಬಳಿಕ ಖಾತೆ ಮೆಚ್ಯೂರ್ ಆಗಲಿದೆ.