alex Certify ಕ್ರಿಕೆಟ್ ಹೇಗೆ ಬಾಂಧವ್ಯ ಬೆಸೆಯುತ್ತದೆ ಎಂಬ ಬಗ್ಗೆ ಫೋಟೋ ಹಂಚಿಕೊಂಡ ಸ್ಪಿನ್ನರ್ ಅಶ್ವಿನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಹೇಗೆ ಬಾಂಧವ್ಯ ಬೆಸೆಯುತ್ತದೆ ಎಂಬ ಬಗ್ಗೆ ಫೋಟೋ ಹಂಚಿಕೊಂಡ ಸ್ಪಿನ್ನರ್ ಅಶ್ವಿನ್..!

Axar, Patel, Ravindra, Jadeja: Ashwin's Pic After Test Win Shows How Cricket  Unites Usವಾಂಖೆಡೆ ಸ್ಟೇಡಿಯಂನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು 372 ರನ್‌ಗಳಿಂದ ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿದೆ.

ಈ ವೇಳೆ ಆಟಗಾರರು ಪರಸ್ಪರ ಹ್ಯಾಂಡ್‌ಶೇಕ್‌ ಮಾಡಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಕೇನ್ ವಿಲಿಯಮ್ಸನ್ ಅವರನ್ನು ಅಪ್ಪಿಕೊಂಡಿದ್ದರೆ, ಕ್ರಿಕೆಟ್ ಹೇಗೆ ಆಟಗಾರರನ್ನು ಒಟ್ಟುಗೂಡಿಸುತ್ತದೆ ಎಂದು ಸಾಬೀತುಪಡಿಸುವ ಫೋಟೋವನ್ನು ಸ್ಪಿನ್ನರ್ ಅಶ್ವಿನ್ ಹಂಚಿಕೊಂಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡ ಅಶ್ವಿನ್, ವಿಶ್ವ ಚಾಂಪಿಯನ್ನರ ವಿರುದ್ಧ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದ್ದಕ್ಕೆ ಸಂಭ್ರಮಿಸಿದ್ದಾರೆ. ಈ ವೇಳೆ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಅಭಿಮಾನಿಗಳಿಗೆ ಪ್ರಮುಖವಾಗಿ ಗಮನಸೆಳೆದಿದ್ದು, ನಾಲ್ವರು ಆಟಗಾರರು ಫೋಟೋಗೆ ಬೆನ್ನು ಹಾಕಿ ನಿಂತಿರುವುದು. ಅಕ್ಸರ್ ಜೊತೆಗೆ ಪಟೇಲ್ ನಂತರ ರವೀಂದ್ರ ಅವರ ಬಲಭಾಗದಲ್ಲಿ ಜಡೇಜಾ ಅವರು ನಿಂತಿರುವುದನ್ನು ಫೋಟೋದಲ್ಲಿ ನೋಡಬಹುದು.

ಈ ಪೋಟೋ ಇದೀಗ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ರೀಟ್ವೀಟ್ ಮಾಡಿದ್ದಾರೆ. ನಿಮ್ಮ ಸೋದರ ಸಂಬಂಧಿಗಳ ಜೊತೆಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದರೆ ಈ ರೀತಿಯಾಗಿ ಬಾಂಧವ್ಯ ಇರುತ್ತದೆ ಎಂದೆಲ್ಲಾ ಅಭಿಮಾನಿಗಳು ರೀಟ್ವೀಟ್ ಮಾಡಿದ್ದಾರೆ.

— Ashwin 🇮🇳 (@ashwinravi99) December 6, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...