ದೇಶದಲ್ಲಿನ ಉಚ್ಛಾಟಿತ ನಾಯಕಿ ಆಂಗ್ ಸೂನ್ ಸೂಕಿ ಅವರಿಗೆ ಸಾರ್ವಜನಿಕ ಶಾಂತಿ ಕದಡಿದ ಹಾಗೂ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಮ್ಯಾನ್ಮಾರ್ ನ ಕಾನೂನು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2015ರಲ್ಲಿ ಸೇನಾ ಬೆಂಬಲಿತ ಪಕ್ಷ ಸೋಲಿಸಿ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷವು ಅಲ್ಲಿನ ಅಧಿಕಾರದ ಗದ್ದುಗೆಗೆ ಏರಿತ್ತು.
ಆನಂತರ 2021ರಲ್ಲಿ ರಲ್ಲಿ ಸೇನಾ ದಂಗೆ ಆರಂಭವಾಗಿ ಹಲವು ಅಹಿತಕರ ಘಟನೆಗಳು ನಡೆದಿದ್ದವು. ಫೆಬ್ರವರಿ 1 ರಂದು ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಅವರ ಮೇಲೆ ಶಾಂತಿ ಕದಡಿದ ಆರೋಪದೊಂದಿಗೆ ಕೋವಿಡ್ ಶಿಷ್ಟಾಚಾರ ಉಲ್ಲಂಘನೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಅವರ ಮೇಲೆ ಕೋರ್ಟ್ ವಿಚಾರಣೆ ಆರಂಭಿಸಿತ್ತು. ಈ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಕೋರ್ಟ್ ತೀರ್ಪು ನೀಡಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಬ್ಲೌಸ್ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಸೇನಾ ದಂಗೆ ನಡೆದು ಹಲವು ತಿಂಗಳು ಕಳೆದರೂ ಸಾರ್ವಜನಿಕರು ದೇಶದ ಹಲವೆಡೆ ಪ್ರತಿಭಟನೆ ಕೈಗೊಂಡಿದ್ದರು. ಪ್ರತಿಭಟನೆ ಕೂಡ ಶಾಂತವಾಗಿಯೇ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ಇಂದು ನಾಯಕಿ ಸೂಕಿ ವಿರುದ್ಧ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಅಲ್ಲಿನ ಅತೀ ದೊಡ್ಡ ನಗರ ಯಾಂಗೋನ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆದಿದ್ದವು. ಆದರೆ, ಯಾಂಗೋನ್ ನಲ್ಲಿ ಪ್ರತಿಭಟನಾನಿರತರ ಮೇಲೆ ಸೇನಾ ವಾಹನ ಹರಿದಿದೆ ಎಂದು ವರದಿಯಾಗಿದೆ.
ಸದ್ಯ ವಾಹನ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನರೆಡೆಗೆ ಸೇನಾ ಟ್ರಕ್ ರಭಸದಿಂದ ನುಗ್ಗಿದೆ. ಆಗ ಅಲ್ಲಿದ್ದ ಜನರು ಓಡಿ ಹೋಗಿರುವುದು ವಿಡಿಯೋದಲ್ಲಿದೆ. ಆನಂತರ ಶಸ್ತ್ರಾಸ್ತ್ರ ಹೊಂದಿದ್ದ ಸೇನೆಯ ಯೋಧರು ಪ್ರತಿಭಟನಾ ನಿರತರನ್ನು ಬೆನ್ನಟ್ಟಿದ್ದಾರೆ, ಗುಂಡಿನ ದಾಳಿ ಕೂಡ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಿಲಿಟರಿ ವಾಹನ ಹರಿಸಿರುವ ಘಟನೆಯಲ್ಲಿ ಯಾಂಗೋನ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರತಿಭಟನೆ ನಡೆಸುತ್ತಿರುವ 11 ಜನರನ್ನು ಸೇನಾಡಳಿತ ಬಂಧಿಸಿದೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿದ್ದವು.