ಕೇರಳದ ಕೊಚ್ಚಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. 27 ವರ್ಷದ ವೃತ್ತಿಪರ ಮಾಡೆಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಕಾಕನಾಡಿನ ಎಡಚಿರದಲ್ಲಿರುವ ಹೋಟೆಲ್‌ನಲ್ಲಿ ಮೂವರು ವ್ಯಕ್ತಿಗಳು ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಪಾನೀಯದಲ್ಲಿ ನಶೆ ಪದಾರ್ಥ ಬೆರೆಸಿ ಕೋಣೆಗೆ ಬೀಗ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಮಾಡೆಲ್ ದೂರಿದ್ದಾಳೆ. ಅತ್ಯಾಚಾರದ ವಿಡಿಯೋ ಮಾಡಿರುವ ಆರೋಪಿಗಳು, ದೂರು ನೀಡಿದ್ರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದರು ಎಂದು ಮಾಡೆಲ್ ಹೇಳಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಾಡೆಲ್, ಕೇರಳದ ಮಲಪ್ಪುರಂ ನಿವಾಸಿ. ಆರೋಪಿಯ ಸೂಚನೆ ಮೇರೆಗೆ ಅವಳು ಕೊಚ್ಚಿ ತಲುಪಿದ್ದರಂತೆ. ಮೂವರು ಆರೋಪಿಗಳು ಮಾಡೆಲ್ ಗೆ ಪರಿಚಿತರು ಎನ್ನಲಾಗಿದೆ. ಸುಲಿನ್ ಎಂಬಾತ ಹೊಟೇಲ್ ಗೆ ಕರೆದಿದ್ದನಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಇಬ್ಬರು ತಲೆ ಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ. ಘಟನೆ ಡಿಸೆಂಬರ್ 1 ಮತ್ತು ಡಿಸೆಂಬರ್ 2 ರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಮೀರ್ ಮತ್ತು ಅಜ್ಮಲ್ ತಪ್ಪಿಸಿಕೊಂಡ ಆರೋಪಿಗಳು.