ಮೊದಲ ಪ್ರೀತಿ, ಮೊದಲ ಭೇಟಿ ಬಗ್ಗೆ ಎಲ್ಲರಿಗೂ ತಮ್ಮದೆ ಕಸನುಗಳಿರುತ್ತವೆ. ಆ ಕ್ಷಣವನ್ನು ಸುಂದರವಾಗಿ ಕಳೆಯಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಮೊದಲ ಡೇಟ್ ನಲ್ಲಿಯೇ ಸಂಬಂಧ ಮುರಿದು ಬೀಳುತ್ತದೆ. ಟಿಕ್ ಟಾಕ್ ನಲ್ಲಿ 28 ವರ್ಷದ ಪೆಗ್ಗಿ ಬೈರ್ನೆ, ತಮ್ಮ ಮೊದಲ ಡೇಟ್ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಇದು ವೈರಲ್ ಆಗಿದೆ.
ಪೆಗ್ಗಿ ಮೊದಲ ಡೇಟಿಂಗ್ ಗೆ ಸಾಕಷ್ಟು ಸಿದ್ಧವಾಗಿ ಬಂದಿದ್ದಳಂತೆ. ಗೆಳೆಯನ ಜೊತೆ ಒಳ್ಳೆ ಸಮಯ ಕಳೆಯುವ ಪ್ಲಾನ್ ನಲ್ಲಿದ್ದಳಂತೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಬಾಯ್ ಫ್ರೆಂಡ್ ತನ್ನ ಜೊತೆ ಇನ್ನೂ ನಾಲ್ಕು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದನಂತೆ. ಪೆಗ್ಗಿ ಎಂದೂ ಇದನ್ನು ಊಹಿಸಿರಲಿಲ್ಲವಂತೆ.
ಬಾಯ್ ಫ್ರೆಂಡ್ ಒಬ್ಬನೇ ಬರ್ತಾನೆ ಎಂದುಕೊಂಡವಳಿಗೆ ಮತ್ತೆ ನಾಲ್ವರು ಹುಡುಗರನ್ನು ನೋಡಿ ಶಾಕ್ ಆಗಿತ್ತಂತೆ. ಅಲ್ಲಿಂದ ಹೋಗುವ ಆಲೋಚನೆ ಕೂಡ ಮಾಡಿದ್ದಳಂತೆ. ಆದ್ರೆ ಆತನ ಜೊತೆ ಬಂದಿದ್ದ ಒಬ್ಬ ಹುಡುಗನ ಮೇಲೆ ಆಕೆ ಕಣ್ಣು ಬಿದ್ದಿದೆ. ಆತನ ಸ್ನೇಹ ಬೆಳೆಸಲು ಮುಂದಾಗಿದ್ದಾಳೆ. ಮೊದಲ ಹುಡುಗನಿಗೆ ಗುಡ್ ಬೈ ಹೇಳಿ, ಆತನ ಸ್ನೇಹಿತನ ಜೊತೆ ಡೇಟಿಂಗ್ ಶುರು ಮಾಡಿದೆ ಎಂದು ಆಕೆ ಹೇಳಿದ್ದಾಳೆ. ಅದೇ ಕೊನೆ, ಈವರೆಗೂ ಆತನನ್ನು ಮತ್ತೆ ಭೇಟಿಯಾಗಿಲ್ಲವೆಂದೂ ಹುಡುಗಿ ಹೇಳಿದ್ದಾಳೆ.