ಪಶ್ಚಿಮ ಆಫ್ರಿಕಾದ ದೇಶ ಸೆನೆಗಲ್ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಸೋಂಕಿನ ಮೊದಲ ಪ್ರಕರಣವನ್ನು ಶುಕ್ರವಾರ ದಾಖಲಿಸಿದೆ. ಈ ಮೂಲಕ ಆಫ್ರಿಕಾದ ಈ ಭಾಗದಲ್ಲಿ ನೈಜೀರಿಯಾ ಹಾಗೂ ಘಾನಾ ಬಳಿಕ ಒಮಿಕ್ರಾನ್ ಸೋಂಕಿನ ಪತ್ತೆ ಮಾಡಿದ ದೇಶ ಸೆನೆಗಲ್ ಆಗಿದೆ.
ಕೋವಿಡ್-19 ಪರೀಕ್ಷೆಗೆಂದು ಮೀಸಲಿಟ್ಟಿರುವ ಐರೆಸ್ಸೆಫ್ ಪ್ರಯೋಗಾಲಯದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಟ್ರೋಲ್‌ಗಳ ಕುರಿತು ಮಾರ್ಮಿಕವಾಗಿ ನುಡಿದ ಸಮಂತಾ
ಈ ಉಪ ಪ್ರದೇಶದ ಮತ್ತೊಂದು ದೇಶದಿಂದ ಸೆನೆಗಲ್‌ಗೆ ಆಗಮಿಸಿದ 58 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ಈ ಪ್ರಕರಣವನ್ನು ಮೊದಲ ಬಾರಿಗೆ ಪತ್ತೆ ಮಾಡಲಾಗಿದೆ. ಈ ವ್ಯಕ್ತಿಗೆ ಏಪ್ರಿಲ್‌ನಲ್ಲಿ ಅಸ್ಟ್ರೆಜ಼ೆಂಕಾ ಹಾಗೂ ಜೂನ್‌ನಲ್ಲಿ ಫೈಜ಼ರ್ ಲಸಿಕೆ ನೀಡಲಾಗಿದೆ.
ಈ ಸೋಂಕಿತನು ರಾಜಧಾನಿ ಡಕಾರ್‌ನ ಹೊಟೇಲ್ ಒಂದರಲ್ಲಿ ನೆಲೆಗೊಂಡಿದ್ದು, ಅನೇಕ ದೇಶಗಳಿಂದ ಬಂದಿದ್ದ 300ರಷ್ಟು ಮಂದಿಯನ್ನುದ್ದೇಶಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ.