ಬೆಂಗಳೂರು: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಅಕ್ಕಿ ದರ ಶೇಕಡ 10 ರಷ್ಟು ಹೆಚ್ಚಳವಾಗಿದೆ. ಪ್ರತಿ ಕೆಜಿ 4 ರೂ.ನಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ದಿನಬಳಕೆಯ ಅಕ್ಕಿಯ ದರ ಕೂಡ ಏರಿಕೆ ಕಂಡಿದೆ.
ಸ್ಟೀಮ್ ರೈಸ್ ದರದಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ. ಕೆಲವು ಬಗೆಯ ಅಕ್ಕಿಗಳು ಕೆಜಿಗೆ 4 ರೂಪಾಯಿಯಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ. ಬಾಸ್ಮತಿ ಸ್ಟೀಮ್ ರೈಸ್ ಸಗಟು ದರ ಕೆಜಿಗೆ 10 ರೂ. ಜಾಸ್ತಿಯಾಗಿದ್ದು, ಚಿಲ್ಲರೆ ದರ 15 ರೂ.ವರೆಗೆ ಏರಿಕೆಯಾಗಿದೆ. ಅಕ್ಕಿ ರಫ್ತು ಬೇಡಿಕೆ ಹೆಚ್ಚಾಗಿರುವುದು ಮತ್ತು ಅಕಾಲಿಕ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಇನ್ನು ಪಂಜಾಬ್, ಹರಿಯಾಣದಲ್ಲಿ ಕೊಯ್ಲು ಮಳೆಯ ಕಾರಣ ವಿಳಂಬವಾಗಿದೆ. ಹೀಗೆ ಅನೇಕ ಕಾರಣಗಳಿಂದಾಗಿ ಅಕ್ಕಿ ದರ ದುಬಾರಿಯಾಗಿದೆ ಎಂದು ಹೇಳಲಾಗಿದೆ.