ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇನ್ನೇನು ಕ್ರಿಸ್ ಮಸ್ ಹಬ್ಬ, ಹೊಸ ವರ್ಷ ಸಮೀಪಿಸುತ್ತಿದೆ. ಹಾಗಾಗಿ ಕೇಕ್ ಗಳನ್ನು ಹೆಚ್ಚಿನವರು ಬಳಸುತ್ತಾರೆ. ಹಾಗಾಗಿ ಚಾಕೋಲೇಟ್ ಕೇಕ್ ತಿಂದು ಬೇಸರವಾಗಿದ್ದರೆ ಹಬ್ಬದಂದು ಮನೆಯಲ್ಲಿಯೇ ಸುಲಭವಾಗಿ ಕ್ಯಾರೆಟ್ ಕೇಕ್ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು : 100ಗ್ರಾಂ ಕ್ಯಾರೆಟ್, 50ಗ್ರಾಂ ಹಿಟ್ಟು, 50ಗ್ರಾಂ, ಕ್ಯಾಸ್ಟರ್ ಸಕ್ಕರೆ, 1 ಮೊಟ್ಟೆ, 50 ಗ್ರಾಂ ಎಣ್ಣೆ, 2 ಗ್ರಾಂ ಅಡುಗೆ ಸೋಡಾ, 2 ಗ್ರಾಂ ಬೇಕಿಂಗ್ ಪೌಡರ್, 2 ಗ್ರಾಂ ಉಪ್ಪು, 50 ಗ್ರಾಂ ವಾಲ್ ನಟ್ಸ್, 2 ಗ್ರಾಂ ದಾಲ್ಚಿನ್ನಿ.
ರಾಜಕೀಯ ಶಕ್ತಿ ತುಂಬಿದ್ದು ಹಾಸನ ಬಿಟ್ಟರೆ ಮಂಡ್ಯ: ದೇವೇಗೌಡರು
ಮಾಡುವ ವಿಧಾನ : ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಅದಕ್ಕೆ ಮೊಟ್ಟೆ, ಎಣ್ಣೆ, ಮತ್ತು ಸಕ್ಕರೆ ಸೇರಿದಂತೆ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ. ಅದನ್ನು ಬೇಕಿಂಗ್ ಟನ್ ಗೆ ಸುರಿಯಿರಿ. ಮತ್ತು 180ಡಿಗ್ರಿ ತಾಪಮಾನದಲ್ಲಿ 30 ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ತೆಗೆದು ನಿಮಗೆ ಬೇಕಾದ ರೀತಿಯಲ್ಲಿ ಅಲಂಕರಿಸಿ.